ಉಕ್ರೇನ್ ಮಹಿಳೆಯರನ್ನು ರೇಪ್​ ಮಾಡಿ ಎಂದ ರಷ್ಯಾ ಸೈನಿಕನ ಪತ್ನಿಗೆ ಎದುರಾಯಿತು ಬಿಗ್ ಶಾಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸಮಯದಲ್ಲಿ ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವಂತೆ ರಷ್ಯಾ ಮಹಿಳೆ ತನ್ನ ಪತಿಗೆ ಹೇಳಿದ್ದು, ಇದೀಗ ಈ ಆಡಿಯೋ ವೈರಲ್ ಆಗಿದೆ.

ಆಕೆ ಯುದ್ಧ ವೇಳೆ ಉಕ್ರೇನ್ ಮಹಿಳೆಯರನ್ನು ಗುರಿಯಾಗಿಸಿಕೊಂಡು ತನ್ನ ಪತಿಗೆ ಸೂಚಿಸಿದ್ದು, ಇದೀಗ ಆಕೆ ಸಿಕ್ಕಿಬಿದ್ದಿದ್ದಾಳೆ. ಜೊತೆಗೆ ಆಕೆಯನ್ನು ‘ಜಾಗತಿಕ ವಾಂಟೆಡ್’ ಪಟ್ಟಿಗೆ ಸೇರಿಸಲಾಗಿದೆ.

ಈ ಕುರಿತು ತನಿಖೆ ನಡೆಸಿದ ಉಕ್ರೇನಿಯನ್ ಸಂಸ್ಥೆ, ಓಲ್ಗಾ ಬೈಕೊವ್ಸ್ಕಯಾ ಎಂಬ ಮಹಿಳೆಯನ್ನು ರಾಜ್ಯ, ಅಂತಾ-ರಾಜ್ಯ ಮತ್ತು ಅಂತಾರಾಷ್ಟ್ರೀಯ ವಾಂಟೆಡ್ ಪಟ್ಟಿಗಳಿಗೆ ಸೇರಿಸಲಾಗಿದೆ.

‘ಲೀಡಿಂಗ್ ಬ್ರಿಟನ್‌’ನ ವರದಿಯ ಪ್ರಕಾರ, ಮಹಿಳೆಯ ಸಂಭಾಷಣೆಯ ತನಿಖೆ ಮಾಡಲಾಗಿದೆ. 27 ವರ್ಷದ ಈಕೆ, ತನ್ನ ಪತಿಗೆ ಕರೆ ಮಾಡಿ, ಅಲ್ಲಿ ಉಕ್ರೇನಿಯನ್ ಮಹಿಳೆಯರು ಇದ್ದಾರೆ. ಅವರ ಮೇಲೆ ಅತ್ಯಾಚಾರ ಮಾಡಿ. ನನಗೆ ನೀವು ಏನನ್ನೂ ಹೇಳುವುದು ಬೇಡ, ನಾನು ಹೇಳುವುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿರುವುದು ಆಡಿಯೋದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!