ಬರೋಬ್ಬರಿ 3.22 ಲಕ್ಷ ರೂಪಾಯಿ ಮೌಲ್ಯದ 604 ಲೀಟರ್ ಅಕ್ರಮ ಮದ್ಯ ವಶಕ್ಕೆ

ಹೊಸದಿಗಂತ ವರದಿ ಅಂಕೋಲಾ:‌ 

ತಾಲೂಕಿನ ಹಾರವಾಡದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ ಲಕ್ಷಾಂತರ ರೂಪಾಯಿ ಮೌಲ್ಯದ ಸರಾಯಿ ವಶಪಡಿಸಿಕೊಂಡಿದ್ದಾರೆ.

ಹಾರವಾಡ ತರಂಗಮೇಟ ಹರಿಕಂತ್ರವಾಡದ ನಿವಾಸಿ ಶ್ವೇತಾ ಆನಂದು ಹರಿಕಂತ್ರ ಎನ್ನುವವರ ಮನೆಯ ಮೇಲೆ ದಾಳಿ ನಡೆಸಲಾಗಿದ್ದು, 324 ಲೀಟರ್ ಗೋವಾ ಫೆನ್ನಿ ಮತ್ತು 280 ಲೀಟರ್ ಹಣ್ಣಿನಿಂದ ತಯಾರಾದ ಫೆನ್ನಿ ಸೇರಿದಂತೆ ಸುಮಾರು 3.22 ಲಕ್ಷ ರೂಪಾಯಿ ಮೌಲ್ಯದ 604 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಪರಾರಿಯಾಗಿದ್ದು ಅಂಕೋಲಾ ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ಅವರ ನೇತೃತ್ವದಲ್ಲಿ ಪ್ರಶಿಕ್ಷಣಾರ್ಥಿ ಅಬಕಾರಿ ಉಪ ನಿರೀಕ್ಷಕ ಮಧುರದಾಸ, ಸಿಬ್ಬಂದಿಗಳಾದ ಈರಣ್ಣ ಕುರುಬೇಟ, ಶ್ರೀಶೈಲ ಹಡಪದ, ರವಿ ಸಂಕಣ್ಣನವರ್,ಗಿರೀಶ್ ಅರವಾಳೆ ಅವರನ್ನೊಳಗೊಂಡ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮದ್ಯ ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!