2024ರಲ್ಲಿ 6.3ಶೇ. ಬೆಳವಣಿಗೆಯಾಗಲಿದೆ ಭಾರತದ ಜಿಡಿಪಿ: ವಿಶ್ವಬ್ಯಾಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2024ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿಯು 6.3 ಶೇಕಡಾದಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ. ಆದಾಯದಲ್ಲಿನ ನಿಧಾನಗತಿಯಿಂದಾಗಿ ಬೇಡಿಕೆಯು ಕುಗ್ಗಲಿದ್ದು ಭಾರತದ ಜಿಡಿಪಿಯು 6.6 ಶೇಕಡಾದಿಂದ 6.3 ಶೇಕಡಾಗೆ ಇಳಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್‌ ವರದಿಯಲ್ಲಿ ಉಲ್ಲೇಖಿಸಿದೆ.

ಹಣದುಬ್ಬರವನ್ನು ಪಳಗಿಸಲು, ಭಾರತೀಯ ರಿಸರ್ವ್ ಬ್ಯಾಂಕ್ ಮೇ 2022 ರಿಂದ ಬಡ್ಡಿದರಗಳನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. “ಏರುತ್ತಿರುವ ಸಾಲದ ವೆಚ್ಚಗಳು ಮತ್ತು ನಿಧಾನಗತಿಯ ಆದಾಯದ ಬೆಳವಣಿಗೆಯು ಖಾಸಗಿ ಬಳಕೆಯ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಜಿಡಿಪಿ ಬೆಳಣಿಗೆಯಲ್ಲಿ ಕುಸಿತವಾಗಲಿದೆ. ದೃಢವಾದ ಸೇವಾ ರಫ್ತು ಮತ್ತು ಕಿರಿದಾಗುತ್ತಿರುವ ಸರಕುಗಳ ವ್ಯಾಪಾರ ಕೊರತೆಯ ಹಿನ್ನಲೆಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯ 2.1 ಶೇಕಡಾಗೆ ಕುಗ್ಗಲಿದೆ” ಎನ್ನಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ನಲ್ಲಿನ ಹಣಕಾಸು ಮಾರುಕಟ್ಟೆಗಳಲ್ಲಿನ ಇತ್ತೀಚಿನ ಪ್ರಕ್ಷುಬ್ಧತೆಯ ಭಾರತ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆಗಳಿಗೆ ಅಲ್ಪಾವಧಿ ಹೂಡಿಕೆಯ ಹರಿವಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ವಿಶ್ವಬ್ಯಾಂಕ್ ಅರ್ಥಶಾಸ್ತ್ರಜ್ಞ ಧ್ರುವ ಶರ್ಮಾ ಹೇಳಿದ್ದಾರೆ.

ಹಣದುಬ್ಬರವು ಹಿಂದಿನ ಹಣಕಾಸು ವರ್ಷದ 6.6 ಶೇಕಡಾಗಿಂತ ಪ್ರಸಕ್ತ ಹಣಕಾಸು ವರ್ಷದಲ್ಲಿ 5.2 ಶೇಕಡಾಗೆ ಇಳಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್‌ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!