ವಯಸ್ಸು 61, ಈಗಾಗಲೇ 87 ಮದುವೆಯಾಗಿರುವ ಈತ 88ನೇ ಮದುವೆಗೂ ರೆಡಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅವರಿಗೆ 61 ವರ್ಷವಾದರೂ ಆತನ ವಯಸ್ಸಿಗೂ ಮೀರಿದಷ್ಟು ಜನರನ್ನು ಮದುವೆ ಮಾಡಿಕೊಂಡಿದ್ದಾರೆ. ಇದುವರೆಗೆ 87ಮಂದಿಯನ್ನು ವಿವಾಹ ಮಾಡಿಕೊಂಡ ಈ ಭೂಪ ಇದೀಗ 88ನೇ ಬಾರಿಗೆ ಮತ್ತೊಂದು ಮದುವೆಗೂ ರೆಡಿಯಾಗಿದ್ದಾರೆ

ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾ ಮೂಲದ ಕಾನ್ ಎಂಬ ವ್ಯಕ್ತಿ ಇದುವರೆಗೆ 87 ವಿವಾಹಗಳನ್ನು ಮಾಡಿಕೊಂಡಿದ್ದಾರೆ. 88ನೇ ಮದುವೆಯಾಗುತ್ತಿರುವವರು ಯಾರು ಗೊತ್ತಾ 86ನೇ ಪತ್ನಿಯನ್ನು 88ನೇ ಪತ್ನಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ..!! ಕಾನ್ ಜೀವನದಲ್ಲಿ ಇಂತಹ ಅನೇಕ ತಿರುವುಗಳಿವೆ. ಕಾನ್ ತನ್ನ 14 ನೇ ವಯಸ್ಸಿನಲ್ಲಿ ತನಗಿಂತ ಎರಡು ವರ್ಷ ದೊಡ್ಡವಳಾದ ಹುಡುಗಿಯನ್ನು ಮದುವೆಯಾದನು. ಅಂದಿನಿಂದ ಇಂದಿನವರೆಗೂ ಬರೋಬ್ಬರಿ 88 ಜನರನ್ನು ಮದುವೆಯಾಗಿದ್ದಾನೆ.

14ನೇ ವಯಸ್ಸಿನಲ್ಲಿ ಮದುವೆಯಾದವಳಿಗೆ ಕಾನ್ ವರ್ತನೆ ಇಷ್ಟವಾಗದೆ ಎರಡು ವರ್ಷಗಳ ಬಳಿಕ ವಿಚ್ಛೇದನ ನೀಡಿದಳು. ಬಳಿಕ ಬೇರೊಂದು ಮದುವೆಯಾದ. ಹಾಗೆ ಶುರುವಾದ ಮದುವೆಗಳ ಸರಮಾಲೆ ಈಗಲೂ ನಡೆಯುತ್ತಲೇ ಇದೆ. ಮದುವೆ ಮಾಡಿಕೊಳ್ಳುವುದು ವಿಚ್ಛೇದನ ಪಡೆಯುವುದು ಇದು ನಡೆಯುತ್ತಲೇ ಇದೆ. 88 ನೇ ಮದುವೆಯಾಗುತ್ತಿರುವ ಮಹಿಳೆ ತನ್ನ ಮಾಜಿ ಪತ್ನಿ. ಇಬ್ಬರೂ ತಮ್ಮದೇ ಆದ ಷರತ್ತುಗಳ ಮೇಲೆ ಬೇರೆಯಾಗಿದ್ದರು ಆದರೆ, ನಂತರ ಮತ್ತೆ ಒಟ್ಟಿಗೆ ಇರಲು ಬಯಸಿ ಈಗ ಕಾನ್ ಅವಳನ್ನು ಮರುಮದುವೆ ಮಾಡಿಕೊಳ್ಳಲು ತಯಾರಾಗಿದ್ದಾನೆ.

ಈ ‘ಪ್ಲೇಬಾಯ್’ ಮದುವೆ ಸರಣಿ ಇನ್ನಾದರೂ ನಿಲ್ಲುವುದೇ? ತನ್ನ ಮಾಜಿ ಪತಿಯನ್ನು ಮದುವೆಯಾಗಲಿರುವ ಈತ ತನ್ನ ದಾಂಪತ್ಯವನ್ನು ಯಾವುದೇ ಗೋಜಿಲ್ಲದೆ ಮುಂದುವರಿಸುವರೇ? ಕಾದು ನೋಡಬೇಕು. ಇಷ್ಟು ಜನರನ್ನು ಮದುವೆಯಾಗಿರುವ ಕಾನ್ ನನ್ನು ಅಲ್ಲಿನ ಜನ ‘ಪ್ಲೇಬಾಯ್ ಕಿಂಗ್’ ಎಂದು ಕರೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!