ನವೆಂಬರ್‌ನಲ್ಲಿ ಹುಟ್ಟಿದವರಿಗೆ ನಿಯತ್ತು ಹೆಚ್ಚಂತೆ, ಇನ್ನೂ ಯಾವ್ಯಾವ ಗುಣಗಳಿವೆ ನೋಡಿ..

ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ಬೇರೆ ಬೇರೆ ಗುಣಗಳಿರುತ್ತವೆ. ನವೆಂಬರ್‌ನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಹೇಗಿದೆ, ಇವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ..

 • ಈ ತಿಂಗಳಲ್ಲಿ ಹುಟ್ಟಿದವರು ತುಂಬಾನೇ ಕ್ರಿಯೇಟಿವ್, ಫೀಲ್ಡ್ ಯಾವುದೇ ಆಗಿರಲಿ ಇವರು ವಿಭಿನ್ನವಾಗಿ ನಿಲ್ಲುತ್ತಾರೆ
 • ಇವರು ಸುರಸುಂದರರು, ನೋಡೋಕೆ ಆಕರ್ಷಕವಾಗಿರುತ್ತಾರೆ. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕು ಎನಿಸುವ ಸೌಂದರ್ಯ ಇವರದ್ದು.
 • ಯಾವ ಕೆಲಸಕ್ಕೂ ಇವರು ಇಲ್ಲಾ ಅನ್ನೋದಿಲ್ಲ. ಶ್ರಮವಹಿಸಿ ಕೆಲಸ ಮಾಡುವುದು ಇವರ ಗುಣ
 • ಇವರಲ್ಲಿ ನಿಯತ್ತು ಜಾಸ್ತಿ. ಕಣ್ಮುಚ್ಚಿ ಇವರನ್ನು ನಂಬಬಹುದು. ಸಂಬಂಧ ಉಳಿಸುವುದರಲ್ಲಿ ಇವರದ್ದು ಎತ್ತಿದ ಕೈ
 • ಇವರಿಗೆ ಎಲ್ಲ ವಿಷಯದಲ್ಲೂ ಕುತೂಹಲ ಜಾಸ್ತಿ, ಇದು ಕೆಲವೊಮ್ಮೆ ಒಳ್ಳೆಯದು ಕೆಲವೊಮ್ಮೆ ಸಮಸ್ಯೆ ತಂದೊಡ್ಡುತ್ತದೆ
 • ಪಾರದರ್ಶಕ ಕ್ವಾಲಿಟಿ ಇವರಲ್ಲಿದೆ. ಮುಚ್ಚುಮರೆ ಮಾಡೋದಿಲ್ಲ. ಹಿಂದೆ ಹಿಂದೆ ಮಾತನಾಡುವುದಿಲ್ಲ.
 • ಭಾವನಾತ್ಮಕ ಜೀವಿಗಳಾದ ಇವರು ಸಂಬಂಧಕ್ಕೆ ಹೆಚ್ಚು ಬೆಲೆ ಕೊಡ್ತಾರೆ. ಸಂಬಂಧಗಳಿಗಾಗಿ ಸಹಿಸಿಕೊಳ್ಳುತ್ತಾರೆ.
 • ಇವರಿಗೆ ಅಹಂ ಜಾಸ್ತಿ, ಬೇಗ ಎಲ್ಲರನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಅವರೇ ಬಂದು ಮಾತನಾಡಿಸಲಿ ಎಂದು ಕಾಯುತ್ತಾರೆ.
 • ಇವರು ಹೆಚ್ಚು ಖಾಸಗಿ ಜೀವನ ಇಷ್ಟಪಡುತ್ತಾರೆ. ಜನರ ಜೊತೆ ಬೆರೆಯೋದಿಲ್ಲ. ತಮ್ಮದಾಯ್ತು, ತಮ್ಮ ಕೆಲಸ ಆಯ್ತು ಎನ್ನುವ ಜಾಯಮಾನದವರು.
 • ಇವರ ಜೊತೆಗಿದ್ರೆ ಬೋರ್ ಆಗೋದಿಲ್ಲ, ಸದಾ ಏನಾದರೂ ಹೊಸತು ಟ್ರೈ ಮಾಡ್ತಾ ಇರ‍್ತಾರೆ.
 • ಸಣ್ಣಪುಟ್ಟ ವಿಷಯಗಳಲ್ಲೇ ಖುಷಿಯಾಗ್ತಾರೆ. ಇವರನ್ನು ಖುಷಿಪಡಿಸೋಕೆ ಹಣ ಬೇಕಿಲ್ಲ, ನಗು ಸಾಕು
 • ಸೀಕ್ರೆಟ್ ಜನ ಇವರು, ಅವರ ಮನಸಸಿನಲ್ಲಿ ಏನಿದೆ, ಲೆಕ್ಕಾಚಾರ ಏನು? ಯಾರಿಗೂ ತಿಳಿಯೋಲ್ಲ.
 • ತಾಳ್ಮೆ ಇದೆ, ಅದರಷ್ಟೇ ಕೋಪ ಇದೆ. ಬೇರೆಯವರಿಗೆ ಒಳ್ಳೆಯ ಮಾರ್ಗದರ್ಶನ ಕೊಡ್ತಾರೆ ಆದರೆ ಇವರು ಬೇರೆಯವರು ಹೇಳಿದ ಮಾತುಗಳನ್ನು ಒಪ್ಪೋದಿಲ್ಲ.
 • ಇದು ತಪ್ಪು, ಹೀಗೆ ಮಾಡಿದರೆ ಕೈ ಸುಟ್ಟುಕೊಳ್ಳುತ್ತೀಯ ಎಂದರೆ ಕೇಳುವುದಿಲ್ಲ. ತಾವೇ ಕೈಸುಟ್ಟುಕೊಂಡಮೇಲೆ ನಂಬಿಕೆ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!