68ನೇ ರಾಷ್ಟ್ರೀಯ ಚಲನಚಿತ್ರೋತ್ಸವ: ಇಲ್ಲಿದೆ ಹೈಲೈಟ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂದು ಸಂಜೆ ದೆಹಲಿಯಲ್ಲಿ 68ನೇ ರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಿತ್ರರಂಗದಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಹಿರಿಯ ನಟಿ ಆಶಾ ಪರೇಖ್ ಅವರಿಗೆ 52 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಅಜಯ್ ದೇವಗನ್, ಸೂರ್ಯ ಮತ್ತು ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ತನ್ಹಾಜಿ ಮತ್ತು ಸೂರರೈ ಪೊಟ್ರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾಯಿತು. ಈ ವರ್ಷ, ಜುಲೈ 2022 ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಯಿತು.

ಈ ಕುರಿತಾದ ಹೈಲೈಟ್ಸ್‌ ಇಲ್ಲಿದೆ:
– ಅಕ್ಟೋಬರ್ 2, 2022 ರಂದು 80 ವರ್ಷಗಳನ್ನು ಪೂರೈಸಲಿರುವ ಹಿರಿಯ ನಟಿ ಆಶಾ ಪಾರೇಖ್ ಅವರು 52ನೇ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದು ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

– ಸೂರರೈ ಪೊಟ್ರು ಚಿತ್ರದ ಅಭಿನಯಕ್ಕಾಗಿ ಸೌಥ್‌ ಸೂಪರ್ ಸ್ಟಾರ್‌ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

– ಬಾಲಿವುಡ್‌ ನ ಅಜಯ್ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮತ್ತು ತಾನ್ಹಾಜಿಯ ನಿರ್ಮಾಪಕರಾಗಿ ಪ್ರಶಸ್ತಿಯನ್ನು ಎರಡು ಪ್ರಶಸ್ತಿಗಳನ್ನು ಪಡೆದರು. ತಾನ್ಹಾಜಿ ಚಿತ್ರವನ್ನು ಸಂಪೂರ್ಣ ಮನರಂಜನೆ ಒದಗಿಸಿದ ಉತ್ತಮ ಜನಪ್ರಿಯ ಚಿತ್ರ ಎಂದು ಗುರುತಿಸಲಾಯಿತು.

– ಹಿರಿಯ ಗಾಯಕಿ ನಂಜಿಯಮ್ಮ ಅವರಿಗೆ ಎಕೆ ಅಯ್ಯಪ್ಪನುಮ್ ಕೊಶಿಯುಮ್ (ಮಲಯಾಳಂ) ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ನೀಡಲಾಯಿತು.

– ಗೀತಕಾರ, ಕವಿ ಮತ್ತು ಚಿತ್ರಕಥೆಗಾರ ಮನೋಜ್ ಮುಂತಾಶಿರ್ ಸೈನಾದಲ್ಲಿನ ಅವರ ಹಾಡಿಗೆ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

– ತುಲಸಿದಾಸ್ ಜೂನಿಯರ್‌ನ ನಾಯಕ ನಟ ವರುಣ್ ಬುದ್ಧದೇವ್ ಅವರು 68 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ತೀರ್ಪುಗಾರರಿಂದ ವಿಶೇಷ ಪ್ರಶಸ್ತಿಯನ್ನು ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!