ಭಾರತದಲ್ಲಿ ಇದುವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚಿನ ದೂರ ಕ್ರಮಿಸುವ ಸಾಮರ್ಥ್ಯವುಳ್ಳ ಕಾರು ಬಿಡುಗಡೆಗೊಳಿಸಿದ ಮರ್ಸಿಡೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಲ್ಲಿ ಇದುವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚಿನ ದೂರ ಕ್ರಮಿಸುವ ಸಾಮರ್ಥ್ಯವುಳ್ಳ ಎಲೆಕ್ಟ್ರಿಕ್‌ ಕಾರನ್ನು ಪ್ರಸಿದ್ಧ ಲಕ್ಸುರಿ ಕಾರ್‌ ತಯಾರಕ ಮರ್ಸಿಡೀಸ್‌ ಬೆಂಜ್‌ ಬಿಡುಗಡೆಗೊಳಿಸಿದೆ.

Mercedes-Benz EQS 580 ಎಂಬ ಹೆಸರಿನ ಈ ಕಾರು ಇದಿವರೆಗಿನ ಎಲೆಕ್ಟ್ರಿಕ್‌ ಕಾರುಗಳಲ್ಲೇ ಅತಿ ಹೆಚ್ಚು ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದ್ದು ಪ್ರತಿ ಚಾರ್ಜ್‌ ಗೆ 857 ಕಿಮಿ ದೂರವನ್ನು ಇದು ಕ್ರಮಿಸಬಲ್ಲುದು. ಇದು 107.8 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಹೊಂದಿದ್ದು ಕಂಪನಿಯ ಪ್ರಕಾರ, ವಿಶ್ವದ ಅತ್ಯಂತ ಹೆಚ್ಚಿನ ಏರೋಡೈನಾಮಿಕ್ ಕಾರು ಎನ್ನಲಾಗಿದೆ.

ಇದು 523 ಅಶ್ವಶಕ್ತಿಯ ಪವರ್ ಔಟ್‌ಪುಟ್ ಸಾಮರ್ಥ್ಯ ಹೊಂದಿದ್ದು 855 Nm ಟಾರ್ಕ್ ಅನ್ನು ಹೊಂದಿದೆ. 4.3 ಸೆಕೆಂಡುಗಳಲ್ಲಿ 0-100 km/h ವೇಗ ಪಡೆಯಬಲ್ಲುದಾಗಿದ್ದು 210 km/h ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಕಾರು 200 kW ವರೆಗಿನ ಚಾರ್ಜಿಂಗ್ ವೇಗವನ್ನು ಸಹ ಬೆಂಬಲಿಸುತ್ತದೆ.

ಇತರ ವೈಶಿಷ್ಟ್ಯಗಳಾಗಿ 3d ನಕ್ಷೆಗಳು, ಮುಂಭಾಗದ ಪ್ರಯಾಣಿಕರಿಗೆ ಮಸಾಜ್ ಆಸನಗಳು, ಹಿಂಭಾಗದ ಪ್ರಯಾಣಿಕರಿಗೆ ಟ್ಯಾಬ್ಲೆಟ್, ಏರ್ ಫಿಲ್ಟರ್ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇ. ಒಂಬತ್ತು ಏರ್‌ಬ್ಯಾಗ್‌ಗಳು, ಆಟೋ ಎಮರ್ಜೆನ್ಸಿ ಸ್ಟಾಪ್ ಸಿಸ್ಟಂ, ಲೇನ್-ಚೇಂಜ್ ಮತ್ತು ಲೇನ್-ಕೀಪ್ ಅಸಿಸ್ಟ್, ಹೊಂದಿದ್ದು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್‌ ರೇಟಿಂಗ್‌ ಹೊಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!