ರಾಜ್ಯದಲ್ಲಿ ಶೇ.69.56 ಮತದಾನ: ಚುನಾವಣಾ ಆಯೋಗದಿಂದ ಅಧಿಕೃತ ವರದಿ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿದ್ದು, ಚುನಾವಣಾ ಆಯೋಗವು ಮತದಾನದ ಕೋಟಾಗಳ ಪರಿಷ್ಕೃತ ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಶೇ.69.56ರಷ್ಟು ಮತಗಳು ಬಿದ್ದಿವೆ.

ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಕಳೆದ ಚುನಾವಣೆಯಂತೆಯೇ ಬೆಂಗಳೂರಿನಲ್ಲಿ ಜನರು ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಶೇ.60ರ ಗಡಿ ದಾಟಿಲ್ಲ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಉಡುಪಿ-ಚಿಕ್ಕಮಗಳೂರು 77.15%, ಹಾಸನ 77.68%, ದಕ್ಷಿಣ ಕನ್ನಡ 77.56%, ಚಿತ್ರದುರ್ಗ 73.30%, ತುಮಕೂರು 78.05%, ಮಂಡ್ಯ 81.67%, ಮೈಸೂರು 70.62%, ಚಾಮರಾಜನಗರ 76.81% ಮತದಾನ ನಡೆದಿದೆ.

ಬೆಂಗಳೂರು ಗ್ರಾಮಾಂತರ 68.30%, ಬೆಂಗಳೂರು ಉತ್ತರ 54.45%, ಬೆಂಗಳೂರು ಕೇಂದ್ರ 54.06%, ಬೆಂಗಳೂರು ದಕ್ಷಿಣ 53.17%, ಚಿಕ್ಕಬಳ್ಳಾಪುರ 77.00%, ಕೋಲಾರ 78.27% ಮತ ಚಲಾವಣೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!