ಶೇ.7.5 ಎಸ್ಟಿ ಮಿಸಲಾತಿ ಶೀಘ್ರದಲ್ಲೇ ಘೋಷಣೆ, ಅನುಮಾನ ಬೇಡ: ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ಶಿಕ್ಷಣ, ಉದ್ಯೋಗ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಎಸ್ಟಿ ವರ್ಗದವರಿಗೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬುದು ನನ್ನದೂ ಪ್ರಭಲ ಬೇಡಿಕೆಯಿದೆ, ನಾನಾ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ, ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ಘೋಷಣೆಯಾಗಲಿದೆ ಇದರಲ್ಲಿ ಅನುಮಾನಬೇಡ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಕ್ಲಾಸಿಕ್ ಫಂಕ್ಷನ್ ಹಾಲ್‌ನಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಸಮಾವೇಶ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸೆ.23ರಂದು ಗಣಿನಾಡು ಬಳ್ಳಾರಿ ನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ, ಸಮುದಾಯದ ಜನರು ಈ ಸಮಾವೇಶ ಯಶಸ್ವಿಗೊಳಿಸಿ, ನನ್ನ ಹಾಗೂ ಪಕ್ಷದ ಕೈ ಬಲಪಡಿಸಬೇಕು, ಎಸ್ಟಿ ಸಮುದಾಯದವರಿಗೆ ಶೇ.7.5ಮೀಸಲಾತಿ ನಮ್ಮ ಸರ್ಕಾರದ ಅವದಿಯಲ್ಲೇ ಘೋಷಣೆಯಾಗಲಿದೆ, ಇದರಲ್ಲಿ ಅನುಮಾನವೇ ಇಲ್ಲ, ಸಮಾವೇಶದಲ್ಲೇ ಸರ್ಕಾರ ಸಿಹಿ ಸುದ್ದಿಕೊಡಲಿದೆ ಕಾದುನೋಡಿ ಎಂದು ಸಮಾವೇಶದಲ್ಲಿ ಘೋಷಿಸುವ ಕುರಿತು ಪರೋಕ್ಷವಾಗಿ ಸಮುದಾಯದ ಜನರಿಗೆ‌ ಭರವಸೆ ನೀಡಿದರು. ಬಿಜೆಪಿಗೆ ಎಸ್ಸಿ ಹಾಗೂ ಎಸ್ಟಿ ಸೇರಿದಂತೆ ಎಲ್ಲ ವರ್ಗದವರ ಬಗ್ಗೆಯೂ ಕಾಳಜಿ ಇದೆ. ಕಳೆದ 2009ರ ಲೋಕಸಭಾ ಚುಮಾವಣೆಯಲ್ಲಿ ಸೋನಿಯಾ ಗಾಂಧಿ ಅವರು, ರಾಯಬರೇಲಿ ಹಾಗೂ ಬಳ್ಳಾರಿ ಕ್ಷೇತ್ರದಿಂದ ಸ್ಪರ್ದಿಸಿದ್ದರು, 2018ರ ವಿಧಾನಸಭೆ ಚುನಾವಣೆಯಲ್ಲಿ ಸಂಸದನಾಗಿದ್ದಾಗ ನನಗೆ ಹಾಗೂ ಬಿಎಸ್ ವೈ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮೋದಿಜೀ ಅವರು ಅವಕಾಶ ಕಲ್ಪಿಸಿದರು. ಆಗ ಸಾಮಾನ್ಯ ಕಾರ್ಯಕರ್ತನಾದ ನನಗೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಹಾಗೂ ಬಾಗಲಕೋಟೆ ಜಿಲ್ಲೆಯ ಬದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು, ಇದು ಬಿಜೆಪಿಯ ಇತಿಹಾಸ, ಸೋನಿಯಾ ಗಾಂದಿ ಅವರಂತೆ ನನಗೆ ಎರಡು ಕಡೆಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಪಾರ್ಟಿ ನಮ್ಮದು, ಮೊಣಕಾಲ್ಮೂರ್ ದಲ್ಲಿ ಗೆಲುವು ಸಾಧಿಸಿದೆ, ಬದಾಮಿಯಲ್ಲಿ ಕೇವಲ 1600 ಮತಗಳ ಅಂತರಗಳಿಂದ ಸೋಲು ಅನುಭವಿಸಿದೆ ಎಂದು ಪಾರ್ಟಿ ಸೂಕ್ತ ಸ್ಥಾನಮಾನ ಕೊಟ್ಟಿರುವ ಬಗ್ಗೆ ಸಮುದಾಯದವರಿಗೆ ತಿಳಿಸಿದರು. ನಗರದಲ್ಲಿ ನಡೆಯಲಿರುವ ಎಸ್ಟಿ ಸಮಾವೇಶಕ್ಕೆ 5ಲಕ್ಷ ಜನರನ್ನು ಸೇರಿಸುವ ಸಂಕಲ್ಪ ಮಾಡಿದ್ದೇವೆ, ಸಮುದಾಯದ ಪ್ರತಿಯೋಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಬಳ್ಳಾರಿಯಲ್ಲಿ ಆಯೋಜಿಸಿದ ಎಸ್ಟಿ ಮೊರ್ಚಾ ಸಮಾವೇಶದ ಯಶಸ್ವಿಗೆ ಪ್ರತಿಯೋಬ್ಬರೂ ಶ್ರಮಿಸಬೇಕು, ಕಾಂಗ್ರೆಸ್ ನಾಯಕರ ನಾನಾ ಸುಳ್ಳು ಆರೋಪಗಳಿಗೆ ಜನರು ಕಿವಿಕೊಡಬೇಡಿ, ನಮ್ಮ ಜನಪರ ಸರ್ಕಾರ, ಬಡವರ, ರೈತರ ಹಿತ ಕಾಯುವ ಸರ್ಕಾರ ನಮ್ಮದು, ಬಳ್ಳಾರಿಯಲ್ಲಿ ನಡೆಯಲಿರುವ ಈ ಸಮಾವೇಶ ಮುಂಬರುವ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!