Thursday, October 6, 2022

Latest Posts

ಮೋದಿಜೀ ಪ್ರಪಂಚಕ್ಕೇ ಭಾರತದ ಶಕ್ತಿ ಹೇಗಿದೆ ಎಂಬುದು ಸಾಬೀತು ಪಡಿಸಿದ್ದಾರೆ: ನಿರ್ಮಲ್ ಕುಮಾರ್ ಸುರಾನಾ

ಹೊಸದಿಗಂತ ವರದಿ, ಬಳ್ಳಾರಿ:

ಇಡೀ ವಿಶ್ವಕ್ಕೆ ಪ್ರಬಲ ಲೀಡರ್ ಆಗಿ ನಮ್ಮ ಪ್ರಧಾನ ಮಂತ್ರಿ ಮೋದಿಜೀ ಹೊರ ಹೊಮ್ಮಿದ್ದಾರೆ, ಇದು ನಮ್ಮ ಹೆಮ್ಮೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರು ಹೇಳಿದರು.
ನಗರದ ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ ಭಾನುವಾರ ಎಸ್ಟಿ ಮೋರ್ಚಾ ರಾಜ್ಯ ಸಮಾವೇಶ ಹಿನ್ನೆಲೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಪ್ರಪಂಚದಲ್ಲಿ ಭಾರತದ ಇಮೇಜ್ ಹೇಗಿತ್ತು ಎಂಬುದನ್ನು ಅವಲೋಕಿಸಿ, ಬೇರೋಬ್ಬರ ಬಳಿ ತೆರಳಿ ಸಾಲ ಕೇಳುವುದನ್ನು ಬಿಟ್ಟರೇ ಏನೂ ಕೇಳುತ್ತಿರಲಿಲ್ಲ, ಇಂದು ಇಡೀ ಪ್ರಪಂಚಕ್ಕೆ ಮೋದಿಜೀ ಅವರು ಭಾರತದ ಶಕ್ತಿ ಹೇಗಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಯಾವುದೇ ರಾಷ್ಟ್ರವಿರಲಿ ಎಲ್ಲದಕ್ಕೂ ನಮ್ಮ ಮೋದಿಜೀ ಅವರ ಸಲಹೆ, ಸೂಚನೆ ಅಗತ್ಯ ಎನ್ನುವ ಸ್ಥಿತಿಯನ್ನು ನಮ್ಮ ಮೋದಿಜೀ ಅವರು ನಿರ್ಮಿಸಿದ್ದಾರೆ. ಮಹಾಮಾರಿ ಕೊರೋನಾ ಕಾಲಘಟ್ಟದಲ್ಲಿ ನಮ್ಮ ಮೋದಿಜೀ ಅವರು ತೆಗದುಕೊಂಡ ಕ್ರಮಗಳಿಗೆ ಉಳಿದ ರಾಷ್ಟ್ರಗಳು‌ ಬೆಚ್ಚಿ ಬಿದ್ದಿವೆ, ಇಡೀ ಪ್ರಂಚವೇ ಮೋದಿಜೀ ಅವರನ್ನು ಹಾಡಿ ಹೊಗಳುತ್ತಿದೆ, ಜನರು ಮಾರಕ ಖಾಯಿಲೆಗೆ ಬಳಲುತ್ತಿರುವಾಗ ಅತೀ ಕಡಿಮೆ ಅವದಿಯಲ್ಲೇ ವ್ಯಾಕ್ಸಿನ್ ಕಂಡು ಹಿಡಿದು ದೇಶದ ಪ್ರಜೆಗೂ ಉಚಿತವಾಗಿ ನೀಡಿದ್ದಾರೆ, ಇದನ್ನು ನಂಬಲು ಅಸಾಧ್ಯವಾದರೂ ಮೋದಿಜೀ ಅವರು ಸಾಬೀತುಪಡಿಸಿ ವಿಶ್ವದ ಗಮನ ಸೆಳೆದಿದ್ದಾರೆ. 25ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಕ್ಸಿನ್ ದಾಸ್ತಾನು ಮಾಡಲಾಗಿದೆ, ಇದು ನಮ್ಮ ಮೋದಿಜೀ ಎಂದು ತಿಳಿಸಿದರು.
ದೇಶದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಎಸ್ಟಿ ಅವರಾಗಿದ್ದು, ಕೊನೆವರೆಗೂ ಅವರ ಹೆಸರು ಬಹಿರಂಗಗೊಂಡಿರಲಿಲ್ಲ, ಇವರ ಹೆಸರನ್ನು ಆಯ್ಕೆ ಮಾಡಿದ್ದು, ಮೋದಿಜೀ ಅವರು, ಘೋಷಣೆ ಆಗುವವರೆಗೂ ಅಭ್ಯರ್ಥಿ ಯಾರು ಎಂಬುದು ಬಹಿರಂಗಗೊಂಡಿರಲಿಲ್ಲ, ಇದು ಬಿಜೆಪಿ ನಡೆ, ಪಕ್ಷ ಎಲ್ಲ ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸಿದೆ, ಪ್ರತಿಯೋಬ್ಬರೂ ಈ ಸಮಾವೇಶ ಯಶಸ್ವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ತ್ರಿವಳಿ ತಲಾಖ್, 371ಜೆ ತೆಗೆಯಲಾಯಿತು, ಎಲ್ಲೂ ಗಲಾಟೆಗಳು ನಡೆದಿಲ್ಲ, ಇದು ನಮ್ಮ ಮೋದಿಜೀ ಅವರ ದಿಟ್ಟ ಹೆಜ್ಜೆ, ನಮ್ಮ ಧರ್ಮ, ನಮ್ಮ ಸಂಸ್ಕೃತಿಯನ್ನು ಹೆಮ್ಮೆ ಪಡುವಂತ ಕಾಲ‌ಬಂದಿದೆ. ಕೇಂದ್ರದ ಮೋದಿಜೀ ಸರ್ಕಾರ, ರಾಜ್ಯದ ಬೊಮ್ಮಾಯಿ‌ ಅವರು ಹಗಲಿರುಳು ಶ್ರಮಿಸುತ್ತಿದೆ. ಇದು ಮುಂದುವರೆಯಬೇಕಾದರೇ ಮತ್ತೋಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು. ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಅತ್ಯಂತ ಯಶಸ್ವಿಯಾಗಿ ನಡೆದಿದೆ, ರಾಷ್ಟ್ರೀಯ ಕಾರ್ಯಕಾರಣಿ ಹೊಸಪೇಟೆಯಲ್ಲೇ ನಡೆಸಬೇಕು ಎನ್ನುವ ಚಿಂತನೆ ‌ನಡೆದಿದೆ, ನಡೆಯೋದು ಪಕ್ಕಾ, ರಾಜ್ಯದಲ್ಲಿ 7ಕಡೆಗಳಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ, ಬಳ್ಳಾರಿಯಲ್ಲಿ ನಡೆಯೋದು ಮೊದಲ ಸಮಾವೇಶ, ಇದರ ಯಶಸ್ವಿಗೆ ಪ್ರತಿಯೋಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಎಸ್ಟಿ ಮೋರ್ಚಾದ ವತಿಯಿಂದ ನಿರ್ಮಲ್ ಕುಮಾರ್ ಸುರಾಣ ಅವರನ್ನು ಹಾಗೂ ಸಚಿವ ಶ್ರೀರಾಮುಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ರಾಮಚಂದ್ರಪ್ಪ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಬಿ.ಶಿವಕುಮಾರ್, ಮಾಜಿ ಸಚಿವ ಶಿವನಗೌಡ ನಾಯಕ್, ಮಾಜಿ ಶಾಸಕ ಗಂಗಾಧರ್ ನಾಯಕ್, ಬಂಗಾರು ಹನುಮಂತ, ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!