ಮಗಳ ಅಶ್ಲೀಲ ಪೋಸ್ಟ್‌ ಮಾಡಿದ್ದನ್ನು ಪ್ರಶ್ನಿಸಿದ ಬಿಎಸ್‌ಎಫ್ ಯೋಧನ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಗಳ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ ಗಡಿ ಭದ್ರತಾ ಪಡೆ ಯೋಧನನನ್ನು ಗುಂಪೊಂದು ಥಳಿಸಿ ಕೊಂದ ಘಟನೆ ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆದಿದ್ದು, ಈ ಸಂಬಂಧ 7 ಜನರನ್ನು ಬಂಧಿಸಲಾಗಿದೆ.
ಚಕ್ಲಾಸಿ ಗ್ರಾಮದಲ್ಲಿ 15 ವರ್ಷದ ಹುಡುಗ ಬಾಲಕಿಯ ಅಶ್ಲೀಲ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ. ಆತ ಯೋಧನ ಮಗಳ ಶಾಲಾ ಸಹಪಾಠಿಯಾಗಿದ್ದು, ಇಬ್ಬರೂ ಸಂಬಂಧದಲ್ಲಿದ್ದರು. ವಿಡಿಯೋ ವೈರಲ್‌ ಆದ ಬಳಿಕ ಬಾಲಕಿಯ ತಂದೆ ಗಮನಕ್ಕೆ ಬಂದಿದ್ದು, ಮೆಲ್ಜಿಭಾಯಿ ವಘೇಲಾ ಶನಿವಾರ ಬಾಲಕನ ಮನೆಗೆ ತೆರಳಿ ಹುಡುಗನ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಲೆ ವಾಗ್ವಾದ ನಡೆದು ಹುಡುಗನ ಕುಟುಂಬದ ಸದಸ್ಯರು ವಘೇಲಾ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿ.ಆರ್.ಬಾಜಪೇಯ್ ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!