ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರಕ್ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ 7 ಮಂದಿ ಸಾವು, 12 ಜನರು ಗಾಯಗೊಂಡಿರುವ ದುರಂತ ಘಟನೆ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ತಿನ್ಸುಕಿಯಾ ಜಿಲ್ಲೆಯ ಕಾಕ್‌ಪಥರ್‌ನ ಬೋರ್-ಡಿರಾಕ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ದುಮ್ಡುಮಾದಿಂದ ದಿರಾಕ್ ಸೋಂಜಾನ್ ಗ್ರಾಮಕ್ಕೆ ಕಾರು ಚಲಿಸುತ್ತಿತ್ತು ಮತ್ತು ಟ್ರಕ್ ಅರುಣಾಚಲ ಪ್ರದೇಶದಿಂದ ಆಗಮಿಸುತ್ತಿತ್ತು. ಈ ವೇಳೆಯಲ್ಲಿ ಕಾರು ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅದರ ಪರಿಣಾಮ 7 ಮಂದಿ ಮೃತಪಟ್ಟಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ.
ಟ್ರಕ್ ಚಾಲಕ ಪಾನಮತ್ತನಾಗಿದ್ದ ಕಾರಣ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿದ್ದು, ಗಾಯಾಳುಗಳನ್ನು ತಿನ್ಸುಕಿಯಾ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.