Monday, September 25, 2023

Latest Posts

ಇಂಡಿಯಾ ಅನ್ನೋ ಹೆಸರಿನಲ್ಲಿ ಪ್ರೀತಿಯೆಲ್ಲಿದೆ? ನಾವು ಭಾರತೀಯರು: ಕಂಗನಾ ಟ್ವೀಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಅನ್ನೋ ಹೆಸರಲ್ಲಿ ಪ್ರೀತಿಯೆಲ್ಲಿದೆ? ನಾವೆಲ್ಲಾ ಭಾರತೀಯರಲ್ವಾ? ದೇಶಕ್ಕೆ ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ನಟಿ ಕಂಗನಾ ಬೆಂಬಲ ಸೂಚಿಸಿದ್ದಾರೆ.

ಇಂಡಿಯಾ ಎನ್ನುವ ಹೆಸರಲ್ಲಿ ಪ್ರೀತಿಸಲು ಏನಿದೆ? ಬ್ರಿಟಿಷರಿಗೆ ಸಿಂಧು ಎಂದು ಹೇಳೋಕೆ ಬರದೆ ಇಂಡಸ್ ಎಂದುಬಿಟ್ಟರು, ಇದು ಇಂಡಸ್, ಹಿಂದಸ್ ಹೀಗೆ ಏನೇನೋ ಆಗಿ ಕಡೆಗೆ ಇಂಡಿಯಾ ಆಗಿಬಿಟ್ಟಿತು. ಭಾರತ ಎನ್ನುವ ಹೆಸರು ಎಂದು ಸುಂದರವಾಗಿದೆ. ಅರ್ಥಪೂರ್ಣವಾಗಿದೆ.

ಇಂಡಿಯಾ ಎನ್ನುವ ಪದಕ್ಕೆ ಅರ್ಥ ಏನು? ಇದು ಬ್ರಿಟಿಷರು ಬಿಟ್ಟು ಹೋದ ಹೆಸರು. ಹಳೆಯ ಡಿಕ್ಷನರಿಗಳಲ್ಲಿ ಇಂಡಿಯನ್ ಎನ್ನುವ ಪದಕ್ಕೆ ಗುಲಾಮರು ಎಂದು ಅರ್ಥ ಬರೆದಿತ್ತು. ಇತ್ತೀಚೆಗಷ್ಟೇ ಅದನ್ನು ಬದಲಾಯಿಸಿದ್ದಾರೆ. ನಾವು ಇಂಡಿಯನ್ಸ್ ಅಲ್ಲ, ಭಾರತೀಯರು ಎಂದಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!