Sunday, November 27, 2022

Latest Posts

ಮಹಾರಾಷ್ಟ್ರದ ಖೋಪೋಲಿಯ ಈ ಅದ್ಭುತ ತಾಣಗಳು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುವುದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈ ಮತ್ತು ಪುಣೆಯ ನಡುವಿನ ಸ್ಥಳಗಳಲ್ಲಿ ಒಂದಾದ ಖೋಪೋಲಿ ಪ್ರಸಿದ್ಧ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಈ ಪಟ್ಟಣವು ನಗರದ ಗದ್ದಲದಿಂದ ದೂರವಾಗಿ, ಪ್ರಕೃತಿಯ ಮಡಿಲಲ್ಲಿ ಗುಣಮಟ್ಟದ ಸಮಯವನ್ನು ಕಳೆಯಲು ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತದೆ. ಖೋಪೋಲಿಯು ಹೇರಳವಾದ ನೈಸರ್ಗಿಕ ಭೂದೃಶ್ಯಗಳು ಮತ್ತು ಸರೋವರಗಳು, ಜಲಪಾತಗಳು, ದೇವಾಲಯಗಳು ಮತ್ತು ಘಾಟ್‌ಗಳನ್ನು ಒಳಗೊಂಡಂತೆ ರಮಣೀಯ ನೋಟಗಳಿಂದ ಅಲಂಕರಿಸಲ್ಪಟ್ಟಿದೆ. ಚಳಿಗಾಲದಲ್ಲಿ ಖೋಪೋಲಿಗೆ ಹೋಗಲು ನೀವು ಯೋಚಿಸುತ್ತಿದ್ದರೆ, ಇಲ್ಲಿ ಭೇಟಿ ನೀಡಲು ಯೋಗ್ಯವಾದ ಹಲವಾರು ಸ್ಥಳಗಳಿವೆ. ಸುಂದರವಾದ ಪ್ರಕೃತಿಯನ್ನು ಸವಿಯುತ್ತಾ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಾರಾಂತ್ಯವನ್ನು ವಿನೋದದಿಂದ ಕಳೆಯಲು ಇದು ಅತ್ಯುತ್ತಮ ತಾಣವಾಗಿದೆ.

ನಿಮ್ಮ ಚಳಿಗಾಲದ ವಿಹಾರದಲ್ಲಿ ಖೋಪೋಲಿಯಲ್ಲಿ ಭೇಟಿ ನೀಡಬಹುದಾದ 7 ಸ್ಥಳಗಳು:

1. ಇಮ್ಯಾಜಿಕಾ ಥೀಮ್ ಪಾರ್ಕ್

ನೀವು ಸಾಹಸ ಪ್ರಿಯರಾಗಿದ್ದರೆ, ಖೋಪೋಲಿಯಲ್ಲಿರುವ ಈ ಥೀಮ್ ಪಾರ್ಕ್ ಅನ್ನು ನೀವು ಇಷ್ಟಪಡುವುದು ಖಚಿತ. ಭಾರತದಲ್ಲಿ ಕುಟುಂಬ ರಜಾದಿನಗಳಿಗಾಗಿ ಇದು ಮೊದಲ ರೀತಿಯ ಥೀಮ್ ಪಾರ್ಕ್ ಆಗಿದೆ. ಥೀಮ್ ಪಾರ್ಕ್, ವಾಟರ್ ಪಾರ್ಕ್, ಬಾಲಿವುಡ್ ಪಾರ್ಕ್, ಸ್ನೋ ಪಾರ್ಕ್ ಮತ್ತು ವರ್ಲ್ಡ್ ಇಲ್ಯುಮಿನೇಟೆಡ್ ಪಾರ್ಕ್ (ಗ್ಲೋಮ್ಯಾಜಿಕಾ) ಹೊಂದಿರುವ ಈ ಬೃಹತ್ ಗಾತ್ರದ ಉದ್ಯಾನವನವು ಎಲ್ಲರಿಗೂ ರೋಮಾಂಚನಕಾರಿ ಸವಾರಿಗಳನ್ನು ಹೊಂದಿದೆ. ಖೋಪೋಲಿಯಲ್ಲಿ ಇದು ನಿರ್ವಿವಾದವಾಗಿ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿನ ರೋಮಾಂಚನ ಪಡೆಯಲು ಒಮ್ಮೆ ಭೇಟಿ ನೀಡಿ!.

2. ಜೆನಿತ್ ಜಲಪಾತ

ಜುಲೈನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದ ದಿನಗಳಲ್ಲಿ ಜಲಪಾತವನ್ನು ಹೆಚ್ಚು ಆನಂದಿಸಬಹುದು. ಸುಂದರವಾದ ಪರಿಸರವು ನೈಸರ್ಗಿಕ ಕೊಳದಲ್ಲಿ ತ್ವರಿತ ಸ್ನಾನವನ್ನು ಆನಂದಿಸಲು ಹತ್ತಿರದ ಸ್ಥಳಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುತ್ತಮುತ್ತಲಿನ ಪ್ರದೇಶದ ನೈಸರ್ಗಿಕ ಹಸಿರು ಮತ್ತು ಭೂದೃಶ್ಯವು ನಿಮ್ಮ ಭೇಟಿಯನ್ನು ಮೌಲ್ಯಯುತವಾಗಿಸುತ್ತದೆ.

3. ತುಂಗರ್ಲಿ ಕೆರೆ
ಖೋಪೋಲಿ ಪಟ್ಟಣದಿಂದ ಸ್ವಲ್ಪ ದೂರದಲ್ಲಿ ತುಂಗರ್ಲಿ ಎಂಬ ಪ್ರಶಾಂತ ಸರೋವರವಿದೆ. ನೀವು ಈ ಸರೋವರಕ್ಕೆ ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಚಳಿಗಾಲದ ಬೆಳಿಗ್ಗೆ ಪಿಕ್ನಿಕ್ ಊಟದ ಜೊತೆಗೆ ಸೂಕ್ತವಾಗಿ ತಯಾರಿ ಮಾಡಿಕೊಂಡು ಬಂದರೆ ಹಚ್ಚ ಹಸಿರಿನ ಕಾಡಿನ ನಡುವೆ ಊಟವನ್ನು ಆನಂದಿಸಬಹುದು. ಛಾಯಾಗ್ರಾಹಕರು ಸರೋವರದ ಸಮೀಪವಿರುವ ಹಲವಾರು ಜಾತಿಯ ಸಸ್ಯ ಮತ್ತು ಪ್ರಾಣಿಗಳ ಛಾಯಾಚಿತ್ರವನ್ನು ಆನಂದಿಸುತ್ತಾರೆ. ನಿಸರ್ಗದ ನಡುವೆ ಬೆರೆತು ಹೋಗಲು ಬಯಸುವವರಿಗೆ ಇದೊಂದು ಸೊಗಸಾದ ತಾಣವಾಗಿದೆ.

4. ಕುನೆ ಜಲಪಾತ

ಮಹಾರಾಷ್ಟ್ರ ರಾಜ್ಯದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಈ ಜಲಧಾರೆಯು ಪಶ್ಚಿಮ ಘಟ್ಟಗಳ ಕಲ್ಲಿನ ಭೂಪ್ರದೇಶಗಳಿಂದ ಆವೃತವಾಗಿದೆ. ಪ್ರವಾಸಿಗರು ಈ ಸ್ಥಳದ ಪ್ರಶಾಂತತೆಯೊಂದಿಗೆ ನೋಟಗಳನ್ನು ಆನಂದಿಸುತ್ತಾರೆ, ಇದು ಮನಸ್ಸು ಮತ್ತು ಆತ್ಮವನ್ನು ಶಾಂತಗೊಳಿಸುವ ರಮಣೀಯತೆಯನ್ನು ಹೊಂದಿದೆ.

5. ಡೆಲ್ಲಾ ಅಡ್ವೆಂಚರ್ ಪಾರ್ಕ್

ಮಹಾರಾಷ್ಟ್ರದ ಪ್ರಸಿದ್ಧ ಸಾಹಸ ಉದ್ಯಾನವನಗಳಲ್ಲಿ ಒಂದಾದ ಡೆಲ್ಲಾ ಅಡ್ರಿನಾಲಿನ್  ಹಲವಾರು ರೋಮಾಂಚಕ ಅನುಭವಗಳನ್ನು ನೀಡುತ್ತದೆ.‌ ಇಲ್ಲಿ ರಾಕ್ ಕ್ಲೈಂಬಿಂಗ್‌ನಿಂದ ಹಿಡಿದು ಜಿಪ್‌ ಲೈನಿಂಗ್‌ವರೆಗೆ, ನೀವು ಹಗಲಿನಲ್ಲಿ ಅನೇಕ ಚಟುವಟಿಕೆಗಳನ್ನು ಆನಂದಿಸಬಹುದು ಮತ್ತು ರಾತ್ರಿಯಿಡೀ ರೆಸಾರ್ಟ್‌ನಲ್ಲಿ ಶಾಂತವಾಗಿ ನಕ್ಷತ್ರ-ಗಳನ್ನು ನೋಡುತ್ತ ದಿನಚವನ್ನು ಸ್ಮರಣೀಯವಾಗಿಸಿಕೊಳ್ಳಬಹುದು. ನೀವು ವಿನೋದದಿಂದ ತುಂಬಿದ ಅನುಭವವನ್ನು ಹೊಂದುವುದು ಖಚಿತ.

6. ಮಹಾದ್ ಗಣಪತಿ ದೇವಸ್ಥಾನ
ಮಹಾರಾಷ್ಟ್ರದ ಅಷ್ಟವಿನಾಯಕನ ಎಂಟು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಹಾಡ್ ಗಣಪತಿ ದೇವಾಲಯವು ದಿನದ ಮುಂಜಾನೆಯಿಂದಲೇ ಭಕ್ತರಿಂದ ತುಂಬಿರುತ್ತದೆ. ಈ ದೇವಾಲಯವು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಿಂದ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಧಾರ್ಮಿಕ ಪ್ರವಾಸಿಗರಿಗೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

7. ಭಜ ಮತ್ತು ಕಾರ್ಲಾ ಗುಹೆಗಳು

ನೀವು ಮಾನವ ನಿರ್ಮಿತ ರಚನೆಗಳು ಮತ್ತು ವಾಸ್ತುಶಿಲ್ಪದ ಅದ್ಭುತಗಳನ್ನು ಇಷ್ಟಪಡುವವರಾಗಿದ್ದರೆ, ಹತ್ತಿರದ ಪ್ರದೇಶದಲ್ಲಿ ಇರುವ ಈ ಗುಹೆಗಳಿಗೆ ಹೋಗುವ ಪ್ಲಾನ್‌ ಮಾಡಿ. ನವೆಂಬರ್‌ನಿಂದ ಫೆಬ್ರವರಿವರೆಗಿನ ತಂಪಾದ ತಿಂಗಳುಗಳಲ್ಲಿ ಈ ಗುಹೆಗಳಿಗೆ ಒಂದು ದಿನದ ಪಿಕ್ನಿಕ್ ಸೂಕ್ತವಾಗಿರುತ್ತದೆ. ಅದ್ಭುತ ಪ್ರವಾಸ ಅನುಭವಗಳನ್ನು ಪಡೆಯಲು ನಿಮ್ಮ ಪ್ರವಾಸದ ಬ್ಯಾಗ್‌ ಗಳನ್ನು ಈಗಲೇ ರೆಡಿ ಮಾಡಿ!.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!