ಜಿ 20 ಶೃಂಗಸಭೆ : ಮ್ಯಾಂಗ್ರೂವ್ ಕಾಡಿಗೆ ಭೇಟಿ ನೀಡಿ, ಗಿಡ ನೆಟ್ಟ ವಿಶ್ವ ನಾಯಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ವಿಶ್ವ ನಾಯಕರು ಇಂಡೋನೇಷ್ಯಾದ ಬಾಲಿಯಲ್ಲಿ ಜಿ೨೦ ಶೃಂಗಸಭೆಯಲ್ಲಿ ಭಾಗಿಯಾಗಿದ್ದು, ಎರಡನೇ ದಿನವಾದ ಇಂದು ಮ್ಯಾಂಗ್ರೂವ್ ಕಾಡಿಗೆ ಭೇಟಿ ನೀಡಿದ್ದಾರೆ.

ಬಾಲಿಯ ತಮನ್ ಹುತಾನ್ ರಾಯ ಮ್ಯಾಂಗ್ರೂವ್ ಕಾಡಿಗೆ ಇಂದು ನಾಯಕರು ಭೇಟಿ ನೀಡಿದ್ದು, ಸಸಿಗಳನ್ನು ನೆಟ್ಟಿದ್ದಾರೆ. ನಂತರ ಮ್ಯಾಂಗ್ರೂವ್ ಕಾಡಿನ ಸುತ್ತ ಹೆಜ್ಜೆ ಹಾಕಿದ್ದಾರೆ.

ಮ್ಯಾಂಗ್ರೂವ್ ಕಾಡಿಗೆ ಭೇಟಿ ನೀಡುವ ಮುನ್ನ ಮೆಟ್ಟಿಲು ಹತ್ತುವಾಗ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮುಗ್ಗರಿಸಿದ್ದಾರೆ, ತಕ್ಷಣವೇ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ಬೀಳದಂತೆ ಹಿಡಿದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!