ಯೂಟ್ಯೂಬ್ ಜಾಹಿರಾತು ವಿರುದ್ಧ 75 ಲಕ್ಷ ರೂ. ಪರಿಹಾರ ಕೇಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಬಿತ್ತು ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಯೂಟ್ಯೂಬ್ ನಲ್ಲಿ ವಯಸ್ಕರ ಅಂಶವಿರುವ ಜಾಹಿರಾತು ಪ್ರಕಟಿಸಿದ್ದನ್ನು ಪ್ರಶ್ನಿಸಿ ವ್ಯಕ್ತಿಯೋರ್ವ ಗೂಗಲ್ ಇಂಡಿಯಾದಿಂದ 75 ಲಕ್ಷ ರೂಪಾಯಿ ಪರಿಹಾರ ಕೇಳಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಆತನಿಗೆ ಕೋರ್ಟ್ 25,000 ದಂಡ ವಿಧಿಸಿದೆ.

ಮಧ್ಯಪ್ರದೇಶದ ನಿವಾಸಿ ವಯಸ್ಕರ ಅಂಶವಿರುವ ಜಾಹಿರಾತುಗಳಿಂದಾಗಿ ತಮ್ಮ ಗಮನ ಬೇರೆಡೆಗೆ ಹೋಗಿದ್ದು, ತಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತಮಗೆ 75 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ವಾದಿಸಿದ್ದರು.

ವಾದ ಆಲಿಸಿದ ನ್ಯಾೆಸ್ ಕೆ ಕೌಲ್ ಹಾಗೂ ಎಎಸ್ ಓಕಾ ಅವರಿದ್ದ ಪೀಠ, ಗೂಗಲ್ ಮಾಲಿಕತ್ವದ ಯೂಟ್ಯೂಬ್ ವೀಡಿಯೋಗಳನ್ನು ಪ್ರಕಟಿಸುವ ವೇದಿಕೆಯಾಗಿದೆ. ನೀವು ಇಂಟರ್ ನೆಟ್ ನಲ್ಲಿ ಜಾಹಿರಾತುಗಳನ್ನು ನೋಡಿದ್ದಕ್ಕಾಗಿ ಪರಿಹಾರ ಕೇಳುತ್ತಿದ್ದೀರಾ? ಹಾಗೂ ಜಾಹಿರಾತು ನೋಡಿ ನಿಮ್ಮ ಗಮನ ಬೇರೆಡೆಗೆ ಹೋಯಿತು ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದೆ.

ಆರ್ಟಿಕಲ್ 32 ರ ಅಡಿಯಲ್ಲಿ ಸಲ್ಲಿಸಲಾಗಿರುವ ಅತಿ ಘೋರ ಅರ್ಜಿಯಾಗಿದ್ದು, ಇಂತಹ ಅರ್ಜಿಗಳು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದು ನ್ಯಾಯಪೀಠ ಹೇಳಿದೆ.

ನಿಮಗೆ ಜಾಹಿರಾತು ಇಷ್ಟವಾಗದ್ದಲ್ಲಿ ನೀವು ನೋಡಬೇಡಿ, ನೋಡುವುದೂ ಬಿಡುವುದೂ ನಿಮ್ಮ ಆಯ್ಕೆಯಾಗಿದ್ದು, ನೋಡುವುದನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದೆ. ಪ್ರಾರಂಭದಲ್ಲಿ ಸುಪ್ರೀಂ ಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಬಳಿಕ ಅದನ್ನು 25,000 ರೂಪಾಯಿಗಳಿಗೆ ಇಳಿಕೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!