Monday, September 25, 2023

Latest Posts

750 ರೂ. ಸಾಲಕ್ಕೆ 3000 ಕೊಡು ಅಂದ್ರು! ಹೆದರಿ ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಕ್ಲೆಟ್, ಕ್ಯಾಂಡಿಗೆ ನಮ್ಮಪ್ಪ ದುಡ್ಡು ಕೊಡ್ತಾರೆ ಎಂದು ಹೇಳಿ ಹೋಗೋ ಕಾಲ ಒಂದಾದರೆ ಇದೀಗ ಮಕ್ಕಳೇ ಬಡ್ಡಿ ಸಾಲ ಮಾಡುವಂತಾಗಿದೆ.

ಅಷ್ಟೇ ಅಲ್ಲದೇ ಈ ಗೀಳಿಗೆ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ವಿದ್ಯಾರ್ಥಿ ಶ್ರೀನಿವಾಸ್ ಹಾಸ್ಟೆಲ್ ಸಿಬ್ಬಂದಿ ಬಳಿ 750 ರೂಪಾಯಿ ಸಾಲ ಪಡೆದಿದ್ದಾನೆ. ತದನಂತರ ಸಾಲ ಹಿಂದಿರುಗಿಸಲು ಹೋದಾಗ ಬಡ್ಡಿ, ಚಕ್ರಬಡ್ಡಿ ಅದೂ ಇದು ಹೇಳಿ ಒಟ್ಟಾರೆ ಮೂರು ಸಾವಿರ ರೂಪಾಯಿ ಕೊಡಬೇಕು ಎಂದು ಹಾಸ್ಟೆಲ್ ಸಿಬ್ಬಂದಿ ಹೇಳಿದ್ದಾರೆ.

ನನ್ನ ಸಾವಿಗೆ ದೃಶ್ಯ ಕಾರಣ, ನಾನು ಆಂಟಿ ಹತ್ತಿರ 750 ರೂಪಾಯಿ ತೆಗೆದುಕೊಂಡಿದ್ದೆ ಆದರೆ ಅವರು 3000 ಎಂದು ಹೇಳಿದ್ದಾರೆ. ನನ್ನ ಸಾವಿಗೆ ದೃಶ್ಯ ಹಾಗೂ ಸಾಹಿಲ್ ಕಾರಣ ಎಂದು ಬರೆದಿದ್ದಾರೆ.

ಶ್ರೀನಿವಾಸ ಪೋಷಕರು ಮಗನ ಸಾವಿಗೆ ನ್ಯಾಯ ಬೇಕು, ಇಲ್ಲವಾದರೆ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!