75ನೇ ಸ್ವಾತಂತ್ರ್ಯ ಸಂಭ್ರಮ: 7,500 ಸೈನಿಕರಿಗೆ ಸಿಕ್ಕಿತು ಚಿನ್ನದ ಉಂಗುರ ಗಿಫ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿದ್ದು, ಈ ಖುಷಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ದೇಶದ ರಕ್ಷಕರಾಗಿ ಕೆಲಸ ಮಾಡಿದ 7,500 ಮಾಜಿ ಸೈನಿಕರಿಗೆ ಪುಣೆಯ ಜ್ಯುವೆಲರ್ಸ್ ಮಾಲೀಕರೊಬ್ಬರು ‘ಕಮಿಟ್​ಮೆಂಟ್​ ರಿಂಗ್​’ ನೀಡುವ ಗುರಿ ಹೊಂದಿದ್ದಾರೆ.
ಈ ರಿಂಗ್ ಚಿನ್ನ, ಬೆಳ್ಳಿ, ವಜ್ರ ಮತ್ತು ಜೇಡಿ ಮಣ್ಣಿನಿಂದ ನಿರ್ಮಿಸಲಾಗಿದೆ. ಇದನ್ನು ಒನ್​ ಇಂಡಿಯಾ ಮಿಷನ್​ ಅಡಿಯಲ್ಲಿ ನೀಡಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿನ ಬೋನಿಸಾ ಜ್ಯುವೆಲರ್ಸ್​ ಈ ಮಹತ್ತದ ನಿರ್ಧಾರ ಕೈಗೊಂಡಿದೆ. ಈಗಾಗಲೇ 88 ಮಾಜಿ ಸೈನಿಕರಿಗೆ ಏಕ್​ ಇಂಡಿಯಾ ರಿಂಗ್ಸ್ ನೀಡಲಾಗಿದೆ. ಈ ಕಾರ್ಯಕ್ಕೆ ಸಂಕೆ ಬಿ.ಬಿಯಾನಿ ಮತ್ತು ಅವರ ಸಹೋದರ ಸಂದೇಶ್ ಬಿಯಾನಿ ಕೈಜೋಡಿಸಿದ್ದಾರೆ.


​ಒನ್ಇಂಡಿಯಾ ಹೆಸರಿನಲ್ಲಿ ನೀಡಲಾಗುವ ಈ ಉಂಗುರಗಳು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿವೆ. ಬೆಳ್ಳಿಯು ಶಾಂತತೆಯನ್ನು ಪ್ರತಿಪಾದಿಸಿದರೆ, ಚಿನ್ನದ ರಿಂಗ್​ ‘ಭಾರತ’ವನ್ನು ಸಂಕೇತಿಸುತ್ತದೆ, ವಜ್ರದಿಂದ ಮಾಡಿದ ರಿಂಗ್​ ನಾವೆಲ್ಲರೂ ವಜ್ರದಷ್ಟೇ ದೃಢರು ಎಂದು ಸಾರಿದರೆ, ಮಣ್ಣಿನಿಂದ ಮಾಡಲಾದ ರಿಂಗ್​ ಏಕತೆಯನ್ನು ಸಾರುತ್ತದೆ. ದೇಶದ ಪ್ರತಿಯೊಂದು ರಾಜ್ಯದಿಂದ ಮಣ್ಣು ಸಂಗ್ರಹಿಸಿ ಈ ರಿಂಗ್​ ತಯಾರಿಸಲಾಗುತ್ತಿದೆ. ಇನ್ನೂ ವಿಶೇಷ ಅಂದರೆ, ದೇಶದ 29 ರಾಜ್ಯಗಳಿಂದ ಮಣ್ಣನ್ನು ಸಂಗ್ರಹಿಸಿ ರಿಂಗ್​ ಮಾಡಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!