ವಿರಾಟ್‌ ಕೊಹ್ಲಿ ಮಹತ್ವದ ದಾಖಲೆ ಭಗ್ನ…

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
ಕಳೆದ ಒಂದೂವರೆ ದಶಕಗಳಿಂದ ವಿಶ್ವಕ್ರಿಕೆಟ್‌ ನ ಸಾಮ್ರಾಟನಾಗಿ ಮೆರೆದ ಕೊಹ್ಲಿ ಫಾರ್ಮ್‌ ಕೆಲದಿನಗಳಿಂದ ಕಳೆಗುಂದಿದೆ. ಮತ್ತೆ ಭರ್ಜರಿ ಫಾರ್ಮ್‌ ಗೆ ಮರಳುವತ್ತ ಕಿಂಗ್ ಕೊಹ್ಲಿ ಚಿತ್ತ ನೆಟ್ಟಿದ್ದಾರೆ. ಈ ನಡುವೆ ಕೊಹ್ಲಿ ನಿರ್ಮಿಸಿದ್ದ ಮಹತ್ವದ ದಾಖಲೆಯೊಂದು ಪಾಕ್‌ ನಾಯಕ ಬಾಬರ್‌ ಅಜಂ ಪಾಲಾಗಿದೆ.
ಶ್ರೀಲಂಕಾ  ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ  ಬಾಬರ್, ತಮ್ಮ 228 ನೇ ಇನ್ನಿಂಗ್ಸ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಸಾಧನೆ ಬರೆದಿದ್ದಾರೆ. ಈ ಮೂಲಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 10000 ರನ್ ಗಡಿಯನ್ನು ತಲುಪಿದ ಏಷ್ಯನ್‌ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಕೊಹ್ಲಿ 232 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ಬ್ಯಾಟರ್‌ಗಳೇ ಈ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ, ಬಾಬರ್ ಮತ್ತು ಕೊಹ್ಲಿಯ ನಂತರ ಕ್ರಮವಾಗಿ ಸುನಿಲ್ ಗವಾಸ್ಕರ್ (243), ಜಾವೇದ್ ಮಿಯಾಂದಾದ್(248) ಮತ್ತು ಸೌರವ್ ಗಂಗೂಲಿ (253 ಇನ್ನಿಂಗ್ಸ್‌) ಈ  ಮೈಲಿಗಲ್ಲನ್ನು ವೇಗವಾಗಿ ಪೂರ್ಣಗೊಳಿಸಿದವರಾಗಿದ್ದಾರೆ.
ಒಟ್ಟಾರೆ ವಿಶ್ವದ ಬ್ಯಾಟ್ಸಮನ್‌ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸ್ ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ಸುಪ್ರಸಿದ್ಧ ವೃತ್ತಿಜೀವನದ ಅವಧಿಯಲ್ಲಿ 206 ಇನ್ನಿಂಗ್ಸ್‌ಗಳಲ್ಲಿ ತಮ್ಮ 10000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಹಾಶಿಮ್ ಆಮ್ಲಾ (217), ಬ್ರಿಯಾನ್ ಲಾರಾ (220), ಮತ್ತು ಜೋ ರೂಟ್ (222) ಪಾಕ್ ನಾಯಕನಿಗಿಂತ ಮುಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!