75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ: 10 ಕೈದಿಗಳಿಗೆ ಬಿಡುಗಡೆ ಭಾಗ್ಯ

ಹೊಸದಿಗಂತ ವರದಿ, ವಿಜಯಪುರ:

75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ನಿಮಿತ್ತ ಸನ್ನಡತೆ ಆಧಾರದ ಹಿನ್ನೆಲೆ ಇಲ್ಲಿನ ದರ್ಗಾ ಜೈಲಿನಿಂದ 10 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಲಭಿಸಲಿದೆ.
ನಗರ ಹೊರ ವಲಯ ದರ್ಗಾ ಬಳಿಯ ಕೇಂದ್ರ ಕಾರಾಗೃಹದಿಂದ ಆ.15 ರಂದು 10 ಕೈದಿಗಳು ಬಿಡುಗಡೆಯಾಗಲಿದ್ದಾರೆ.
ಅಲ್ಲದೇ, ಉತ್ತಮ ಜೀವ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಕೈದಿಗಳಲ್ಲಿ ಮೂವರು ಸಹೋದರರು ಹಾಗೂ ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಇದ್ದಾರೆ. ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಹಾಗೂ ಇವರ ತಂದೆ ಮಲಕಾರಿ ಜಟಗೊಂಡ ಇವರು ಬಿಡುಗಡೆಯಾಗುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಕ್ಕಲಕಿ ಕ್ರಾಸ್ ನಿವಾಸಿ ಯಾಗಿರುವ ಇವರು, ಗ್ರಾಮಸ್ಥರೊಬ್ಬರ ತೋಟದಲ್ಲಿ ಹೂವು ಕೀಳಿದ್ದಾರೆ ಎಂಬ ಕಾರಣ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದ್ದಾಗ ತಂದೆ ಹಾಗೂ ಅವರ ಮೂವರು ಮಕ್ಕಳು ಹೂವು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಲ್ವರಿಗೂ 2ವರ್ಷದ ಶಿಕ್ಷೆಯಾಗಿತ್ತು. ಈಗ ಇವರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡ ಲಾಗುತ್ತಿದೆ.
ಇವರ ಜತೆ ಸಿದ್ದಪ್ಪ ಮಾದರ, ಅಪ್ಪುಹಿರೇಮಠ, ಮಾಯಪ್ಪ ವಾಡೇದ, ಉಮಾ ಚವ್ಹಾಣ ಹಾಗೂ ಮುತ್ತವ್ವ ನಾಗವ್ವಗೋಳ ಸೇರಿ 10 ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!