ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಯುವಕ, ಯುವತಿ ನಡುವೆ ನಡೆದ ಚಾಟಿಂಗ್ ಟೇಕಾಫ್ ಗೆ ಸಿದ್ಧವಾಗಿದ್ದ ವಿಮಾನ ಸಂಚಾರ ಸ್ಥಗಿತಕ್ಕೆ ಕಾರಣವಾಗಿದೆ.
ಮಂಗಳೂರು ಏರ್ಪೋರ್ಟ್ ನಲ್ಲಿ ಯುವಕ ಮತ್ತು ಯುವತಿ ನಡುವಿನ ಚಾಟಿಂಗ್ ಆತಂಕಕ್ಕೆ ಹುಟ್ಟಿಸಿದ್ದು, ಇದರಿಂದ ಮುಂಬೈಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದಂತ ವಿಮಾನವನ್ನು ಸ್ಥಗಿತಗೊಂಡಿದೆ.
ಇಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದಂತ ಇಬ್ಬರು ಯುವಕ-ಯುವತಿಯರು ಪರಸ್ಪರ ಚಾಟಿಂಗ್ ಮಾಡಿಕೊಂಡಿದ್ದರು. ಯುವತಿ ಬೆಂಗಳೂರಿಗೆ, ಯುವಕ ಮುಂಬೈಗೆ ತೆರಳೋದಕ್ಕೆ ಆಗಮಿಸಿದ್ದರು. ಮುಂಬೈಗೆ ತೆರಳಲು ವಿಮಾನ ಸಿದ್ಧಗೊಂಡಿದ್ದರಿಂದ, ಯುವಕ ವಿಮಾನದೊಳಗೆ ತೆರಳಿದ್ದನು. ಇತ್ತ ಬೆಂಗಳೂರಿಗೆ ತೆರಳಬೇಕಿದ್ದಂತ ವಿಮಾನಕ್ಕೆ ಕಾಲಾವಕಾಶವಿದ್ದ ಕಾರಣ, ಯುವತಿ ನಿಲ್ದಾಣದಲ್ಲಿಯೇ ಯುವಕನೊಂದಿಗೆ ವಾಟ್ಸಾಪ್ ಚಾಟಿಂಗ್ ನಲ್ಲಿ ತೊಡಗಿದ್ದಳು. ಈ ವೇಳೆ ವಿಮಾನದ ಭದ್ರತೆಯ ಬಗ್ಗೆಯೂ ಚಾಟಿಂಗ್ ಮಾಡುತ್ತಿದ್ದದ್ದನ್ನು ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ.ಈ ಬಗ್ಗೆ ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಇದರಿಂದ ಮುಂಬೈ ವಿಮಾನ ಸಂಚಾರ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ಮಾಡಲಾಗಿದೆ. ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಯುವಕ ಮತ್ತು ಯುವತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಳಿಕ ವಿಮಾನವನ್ನು ಟೇಕ್ ಆಫ್ ಗೆ ಅವಕಾಶ ನೀಡಲಾಗಿದೆ.