75ನೇ ಸ್ವಾತಂತ್ರ್ಯೋತ್ಸವ: ರಾಷ್ಟ್ರಧ್ವಜ ಖರೀದಿಗೆ ಮುಗಿಬಿದ್ದ ಜನ

ಹೊಸದಿಗಂತ ವರದಿ, ಬಳ್ಳಾರಿ:
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ರಾಯಲ್ ವೃತ್ತ ಸೇರಿದಂತೆ ನಾನಾ ಕಡೆ ರಾಷ್ಟ್ರಧ್ವಜ ಮಾರಾಟ ಜೋರಾಗಿತ್ತು.
ದ್ವಿಚಕ್ರ ವಾಹನ ಸವಾರರು, ದೇಶಭಕ್ತರು ರಾಷ್ಟ್ರಧ್ವಜ ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂತು. ಅನಂತಪೂರ್ ನಗರದಿಂದ ನಗರಕ್ಕೆ ಆಗಮಿಸಿದ ವ್ಯಾಪಾರಿಗಳು ನಗರದ ರಾಯಲ್ ವೃತ್ತದ ಬಳಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂತು. ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯಾಪಾರಿ ಅವಿನಾಶ್, ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮ ಮುಗಿಲು ಮುಟ್ಟಿದ್ದು, ರಾಷ್ಟ್ರಧ್ವಜ ವ್ಯಾಪಾರ ಕಳೆದ ವರ್ಷಕ್ಕಿಂತ ಈ ಬಾರಿ ಹಚ್ಚಿದೆ. ದೇಶ ಭಕ್ತರು ಅಭಿಮಾನದಿಂದ ಖರೀದಿಸುತ್ತಿದ್ದಾರೆ. 150, 100, 80, 50 ರೂ.ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಫ್ಯಾಕ್ಟರಿ ಯಿಂದ ರಾಷ್ಟ್ರಧ್ವಜಗಳನ್ನು ನಾವು ಖರೀದಿಸಿ ತಂದಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!