‘777 ಚಾರ್ಲಿ’ ಟ್ರೈಲರ್ ಬಿಡುಗಡೆ: ಸಿನಿಮಾ ಕುರಿತು ರಕ್ಷಿತ್ ಶೆಟ್ಟಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 777 ಚಾರ್ಲಿ ಯ ಟ್ರೈಲರ್ ಇಂದು ಮಧ್ಯಾಹ್ನ 12.45ಕ್ಕೆ ಕನ್ನಡ, ತೆಲುಗು, ತಮಿಳು ಮಲೆಯಾಳಂ ಹಾಗೂ ಹಿಂದಿಯಲ್ಲಿ ಟ್ರೈಲರ್ ಬಿಡುಗಡೆ ಆಗಿದೆ.
ಚಿತ್ರದ ಕನ್ನಡ ಟ್ರೈಲರ್ ಅನ್ನು ಈ ಚಿತ್ರದಲ್ಲಿರುವ ಚಾರ್ಲಿ ಶ್ವಾನ ತನ್ನದೇ ಮಾತಿನಲ್ಲಿ​​ ಲಾಂಚ್ ಅಂತಾ ಹೇಳುವ ಮೂಲಕ ಬಿಡುಗಡೆ ಮಾಡಿತು. ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್, ಸಾಯಿ ಪಲ್ಲವಿ, ತಮಿಳಿನಲ್ಲಿ ಧನುಷ್ ಹಾಗೂ ಮಲೆಯಾಳಂನಲ್ಲಿ ನಿವಿನ್ ಪೌಲ್​ ಸೋಷಿಯಲ್ ಮೀಡಿಯಾದಲ್ಲಿ ಅನಾವರಣ ಮಾಡಿದ್ದಾರೆ.

ಒಬ್ಬ ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯದ ಕಥೆ ಒಳಗೊಂಡಿರುವ ‘777 ಚಾರ್ಲಿ’ ಸಿನಿಮಾದಲ್ಲಿ ಧರ್ಮ (ರಕ್ಷಿತ್ ಶೆಟ್ಟಿ) ಮತ್ತು ಚಾರ್ಲಿ ಎಂಬ ಶ್ವಾನದ ಕಾಂಬಿನೇಷನ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ.

ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಈ ಸಿನಿಮಾ ಆರಂಭ ಆಗುವುದಕ್ಕೆ ನಿರ್ಮಾಪಕರಾದ ಜಿ.ಎಸ್ ಗುಪ್ತ ಹಾಗೂ ಪರಮ್ ಸ್ಟುಡಿಯೋ ಲಾಂಚ್ ವೇಳೆ ಪುನೀತ್ ರಾಜ್‍ಕುಮಾರ್ ಸರ್ ಬಂದು ಅನಾವರಣ ಮಾಡಿದ್ದರು. ಅಲ್ಲಿಂದ 777 ಚಾರ್ಲಿ ಸಿನಿಮಾ ಆರಂಭವಾಯಿತು.ಈ ಸಿನಿಮಾದ ಪಯಣದ ಎಲ್ಲವನ್ನೂ ಹೇಳಲು ಆಗುವುದಿಲ್ಲ. ಯಾಕೆಂದರೆ ಅಷ್ಟೊಂದು ಎಮೋಷನ್ಸ್​ ಈ ಚಿತ್ರದಲ್ಲಿದೆ. ಸಿನಿಮಾ ಬಿಡುಗಡೆಗೂ ಮುಂಚೆ ಒಳ್ಳೆಯ ಬ್ಯುಸಿನೆಸ್ ಆಗಿದೆ, ಹೀಗಾಗಿ ನಾವು ನಿರಾತಂಕವಾಗಿದ್ದೇವೆ. ಈ ಸಿನಿಮಾ ನೋಡಿದ ಎಲ್ಲರೂ ತಮ್ಮ ಮನೆಯಲ್ಲೂ ಚಾರ್ಲಿ ತರಹದ ಶ್ವಾನ ಬೇಕು ಅಂತಾರೆ ಎಂದು ಹೇಳಿದರು.

777 ಚಾರ್ಲಿಗೆ ರಿಷಭ್ ಶೆಟ್ಟಿ ಜೊತೆ ಈ ಹಿಂದೆ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿರುವ ಯುವ ನಿರ್ದೇಶಕ ಕಿರಣ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ‌ ಮಾಡಿದ್ದಾರೆ. ನೊಬಿನ್ ಪೌಲ್ ಸಂಗೀತವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಪರಮ್ ಸ್ಟುಡಿಯೋಸ್​​ನಲ್ಲಿ ಜಿ‌.ಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ಈ ಸಿನಿಮಾ ನಿರ್ಮಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಜೂನ್ 10ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!