ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ದೇಶದ 79 ಲಕ್ಷ ಮಕ್ಕಳ ಕೈಸೇರಿತು ಬಾಲ ಆಧಾರ್ ಕಾರ್ಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲ ಆಧಾರ್ ನೋಂದಣಿ ಪ್ರಕ್ರಿಯೆ ಚುರುಕುಗೊಂಡಿರುವ ಬೆಎನ್ನಿಗೇ ಕಳೆದ 4 ತಿಂಗಳಲ್ಲಿ 5 ವರ್ಷದೊಳಗಿನ 79 ಲಕ್ಷ ಮಕ್ಕಳು ಆಧಾರ್ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಮಾಹಿತಿ ನೀಡಿದೆ. ಮಕ್ಕಳ ಮುಖದ ಚಹರೆ ಮತ್ತು ಅಧಿಕೃತ ಆಧಾರ್ ಹೊಂದಿರುವ ಹೆತ್ತವರ ಅಥವಾ ಪೋಷಕರ ಬಯೋಮೆಟ್ರಿಕ್ ಮಾಹಿತಿ ಆಧಾರದಲ್ಲಿ ಬಾಲ ಆಧಾರ್ ನೋಂದಣಿ ಮಾಡಲಾಗಿದೆ.

ಐದು ವರ್ಷದೊಳಗಿನ ಮಕ್ಕಳಿಗೆ ಬಾಲ ಆಧಾರ್ ಉಪಕ್ರಮದ ಅಗತ್ಯದ ಬಗ್ಗೆ ಅರಿವು ಮೂಡಿಸುವುದು, ಜತೆಗೆ ಈ ಉಪಕ್ರಮದ ಹಲವು ಪ್ರಯೋಜನಗಳನ್ನು ಹೆತ್ತವರಿಗೆ ತಲುಪಿಸುವುದು ಈ ನಿಟ್ಟಿನಲ್ಲಿ ಮುಂದುವರೆದಿರುವ ಪ್ರಯತ್ನಗಳ ಹಿಂದಿನ ಆಶಯವಾಗಿದೆ ಎಂದು ಖಾತೆಯು ಆ.15ರಂದು ಪ್ರಕಟಿಸಿತ್ತು.

ಬಾಲ ಆಧಾರ್ ಕಾರ್ಡ್ ಬಣ್ಣ ನೀಲಿ. ಮಗುವಿಗೆ 5 ವರ್ಷ ಪೂರ್ತಿಯಾಗೋ ತನಕ ಕಾರ್ಡ್ ಬಣ್ಣದಲ್ಲಿ ಬದಲಾವಣೆ ಇರಲ್ಲ. 5ವರ್ಷ ದಾಟುತ್ತಲೇ ಹೆತ್ತವರು, ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ಆಧಾರ್ ಸೇವಾ ಕೇಂದ್ರಕ್ಕೆ ನೀಡಬೇಕು. ಅಲ್ಲಿ ಡಿ-ಡುಪ್ಲಿಕೇಶನ್ ಪ್ರಕ್ರಿಯೆ ಸಹಿತ ಕಡ್ಡಾಯವಾಗಿ ಬಯೋಮೆಟ್ರಿಕ್ ಸಿದ್ಧಗೊಳಿಸುವಿಕೆ (ಎಂಬಿಯು)ಪ್ರಕ್ರಿಯೆಗಳು ಪೂರ್ತಿ ಯಾದ ನಂತರ ಮಗುವಿಗೆ ಎಲ್ಲರಿಗೂ ನೀಡಲಾಗುವ ಮಾದರಿ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತೆ. ಆಧಾರ್ ಕಾರ್ಡ್‌ನ ಬಣ್ಣ ಬದಲಾದರೂ ಆಧಾರ್ ಸಂಖ್ಯೆ ಮಾತ್ರ ಬದಲಾಗುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!