ʼವಿರಾಟ್ ಅದೊಂದು ತಪ್ಪು ಮಾಡಿದ್ರು… ಏಷ್ಯಾಕಪ್ ಗೂ ಮುನ್ನ ಕೊಹ್ಲಿ ನಡೆ ಪ್ರಶ್ನಿಸಿದ ಮಾಜಿ ಪಾಕ್‌ ಆಟಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಅಂತಾರಾಷ್ಟ್ರೀಯ‌ ಪಂದ್ಯಗಳಿಂದ ವಿರಾಮದಲ್ಲಿದ್ದಾರೆ. ಇದೇ ಆಗಸ್ಟ್ 28 ರಂದು ಪ್ರಾರಂಭವಾಗಲಿರುವ ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರಾಟ್‌ ಕಣಕ್ಕಿಳಿಯಲಿದ್ದಾರೆ. ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. ನವೆಂಬರ್ 2019 ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಶತಕ ಬಾರಿಸಿದ್ದ ಅವರು ಕೊನೆಯ ಅಂತರಾಷ್ಟ್ರೀಯ ಶತಕವನ್ನು ಗಳಿಸಿ 1,000 ದಿನಗಳಿಗಿಂತ ಹೆಚ್ಚು ದಿನಗಳು ಕಳೆದಿವೆ. ಪಾಕಿಸ್ತಾನ ವಿರುದ್ಧದ ಪಂದ್ಯದಿಂದಲೇ ಕಂಬ್ಯಾಕ್‌ ಮಾಡುವ ಭರವಸೆಯನ್ನು ಕೊಹ್ಲಿ ಹೊಂದಿದ್ದಾರೆ. ಅದಕ್ಕಾಗಿ ನೆಟ್‌ ನಲ್ಲಿ ಬೆವರು ಹರಿಸುತ್ತಿದ್ದಾರೆ.
ಕೊಹ್ಲಿ ಬ್ಯಾಡ್‌ ಫಾರ್ಮ್‌ ವಿರುದ್ಧ ಮಾತನಾಡಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾಕೊಹ್ಲಿ ನಡೆಯುನ್ನು ಪ್ರಶ್ನಿಸಿದ್ದಾರೆ. ಕೊಹ್ಲಿ ಫಾರ್ಮ್ ಅನ್ನು ಮರಳಿ ಪಡೆಯಲು ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಆಡಬೇಕಿತ್ತು. ಅಂತರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಮೂಲಕ ಕೊಹ್ಲಿ ತಪ್ಪು ಮಾಡಿದ್ದಾರೆ.  ಅವರಿಗೆ ವಿಶಾಂತಿಯ ಅಗತ್ಯವಿತ್ತು ಎಂದಾಗಿದ್ದರೆ ಐಪಿಎಲ್ ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯಬಹುದಿತ್ತು ಎಂದು ಕನೇರಿಯಾ ಅಭಿಪ್ರಾಯ ಪಟ್ಟಿದ್ದಾರೆ.
“ವಿರಾಟ್ ಕೊಹ್ಲಿ ಫಾರ್ಮ್‌ ಮರಳಿ ಪಡೆಯಲು ಕಷ್ಟಪಡುತ್ತಿದ್ದಾರೆ ಆದರೆ, ಸಮಯವು ತುಂಬಾ ದೂರ ಹೋಗಿದೆ. ಅವರು ಕಳೆದ ಮೂರು ವರ್ಷಗಳಿಂದ ಈ ಸಂದಿಗ್ಧತೆ ಅನುಭವಿಸುತ್ತಿದ್ದಾರೆ. 2021ರ ಟಿ- 20 ವಿಶ್ವಕಪ್ ಬಳಿಕ ಅವರು ತಮ್ಮ ನಾಯಕತ್ವವನ್ನು (ಏಕದಿನ) ಕಳೆದುಕೊಂಡರು ಮತ್ತು ನಂತರ ಬಿಸಿಸಿಐ ಜೊತೆಗೆ ಅವರ ಮನಸ್ತಾಪದದ ವಿಚಾರಗಳು ಮಾಧ್ಯಮಗಳಲ್ಲಿ ಸುದ್ದಿಯಾದವು. ಕ್ರಿಕೆಟ್‌ ಜಗತ್ತಿನಲ್ಲಿ ಇಂತಹ ಸಂಗತಿಗಳು ಹಲವಾರು ಬಾರಿ ಸಂಭವಿಸಿವೆ. ಕೊಹ್ಲಿ ತಮ್ಮೆಲ್ಲಾ ಸಮಸ್ಯೆಗಳನ್ನು ಮರೆತು ಬ್ಯಾಟಿಂಗ್‌ನತ್ತ ಹೆಚ್ಚು ಗಮನಹರಿಸಬೇಕು. ಅವರು ಇನ್ನೂ ಕೆಲವು ವರ್ಷಗಳ ಕಾಲ ಆಡಲು ಬಯಸಿದರೆ ಈಗಿನಿಂದಲೇ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಕನೇರಿಯಾ ಇಂಡಿಯಾ ಟುಡೇ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಪ್ರಕಾರ ವೆಸ್ಟ್ ಇಂಡೀಸ್ ಸರಣಿಯಿಂದ ಕೊಹ್ಲಿ ಹೊರಕ್ಕುಳಿದಿದ್ದು ತಪ್ಪು ನಿರ್ಧಾರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಉದ್ದೇಶದಿಂದ ಭಾರತದ ಮಾಜಿ ನಾಯಕ ಕೆಲವು ಐಪಿಎಲ್ ಪಂದ್ಯಗಳನ್ನು ಬಿಟ್ಟುಬಿಡಬೇಕಿತ್ತು. ಏಕೆಂದರೆ ಅಂತರಾಷ್ಟ್ರೀಯ ಕ್ರಿಕೆಟ್ ನ ಅನುಭವಗಳು ಅವರನ್ನು ಮರಳಿ ಫಾರ್ಮ್‌ಗೆ ತರಬಹುದಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಅವರಿಗೆ ನಿರ್ಣಾಯಕವಾಗಿತ್ತು ಮತ್ತು ಅವರು ಆ ಸರಣಿಯಲ್ಲಿ ಬಂದು ಆಡಬೇಕಿತ್ತು” ಎಂದು ಕನೇರಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!