ಗ್ರೀಸ್‌ನಲ್ಲಿ ದೋಣಿ ಮುಳುಗಿ 79 ವಲಸಿಗರು ಸಾವು, ಲೆಕ್ಕವಿಲ್ಲದಷ್ಟು ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಗ್ರೀಸ್‌ನ ಕರಾವಳಿ ಭಾಗದಲ್ಲಿ ಮೀನುಗಾರಿಕಾ ದೋಣಿ ಮುಳುಗಿದ್ದು, ಕನಿಷ್ಠ 79 ವಲಸಿಗರು ಮೃತಪಟ್ಟಿದ್ದಾರೆ.

ಪೂರ್ವ ಲಿಬಿಯಾದ ಟೊಬ್ರುಕ್‌ನಿಂದ ಹೊರಟಿದ್ದ ದೋಣಿಯಲ್ಲಿಸಾಕಷ್ಟು ಮಂದಿ ನಾಪತ್ತೆಯಾಗಿದ್ದು, ಕಳೆದುಹೋದವರಿಗಾಗಿ ಹುಡುಕಾಟ ನಡೆಯುತ್ತಿದೆ. ನೂರಾರು ಮಂದಿ ನಾಪತ್ತೆಯಾಗಿದ್ದು, ವ್ಯಾಪಕ ಶೋಧ ನಡೆಸಲಾಗುತ್ತಿದೆ.

ನಡುರಾತ್ರಿ ದೋಣಿ ಮುಳುಗಿದ್ದು, ಈವರೆಗೆ 104 ಜನರನ್ನು ರಕ್ಷಿಸಲಾಗಿದೆ. 79  ಶವಗಳನ್ನು ಸಮುದ್ರದಿಂದ ವಶಪಡಿಸಿಕೊಂಡಿದ್ದು, ದೋಣಿಯಲ್ಲಿ ಎಷ್ಟು ಪ್ರಯಾಣಿಕರಿದ್ದರು ಎನ್ನುವ ಲೆಕ್ಕ ತಿಳಿದಿಲ್ಲ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸಾಕಷ್ಟು ದೇಶದ ಜನರು ಬೋಟ್‌ನಲ್ಲಿ ಇದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!