ಇಂದು ವಿಶ್ವ ಮಲ್ಲಕಂಬ ದಿನ – ಬನ್ನಿ ದೇಸಿ ಕ್ರೀಡೆಯ ಮಹತ್ವ ಅರಿಯೋಣ

– ಅಮೋಘ ಹಿರೇಮಠ
ಮಲ್ಲಕಂಬ ಕ್ರೀಡಾಪಟು, ಧಾರವಾಡ

ಯಾವ ಜಿಮ್ನಾಸ್ಟಿಕನ್ನು ಇಡೀ ಜಗತ್ತನ್ನೇ ಬೆರೆಗುಗೊಳಿಸಿದ ಕ್ರೀಡೆ ಎಂದು ಕರೆಯುತ್ತಾರೋ ಆ ಕ್ರೀಡೆ ಹುಟ್ಟುವ ಮೊದಲೇ ಭಾರತದಲ್ಲಿ ಮಲ್ಲಕಂಬ ಕ್ರೀಡೆ ಗ್ರಾಮೀಣ ಪ್ರದೇಶಗಳಲ್ಲಿ ಯುವಕರ ಮನ ಮತ್ತು ದೇಹಗಳನ್ನು ಉರಿಗೊಳಿಸುವ ಕೆಲಸ ಆರಂಭಿಸಿತ್ತು. ಭಾರತದಲ್ಲಿ ಮಲ್ಲಕಂಬ ಎನ್ನುವ ಅಪ್ಪಟ ದೇಸಿ ಕ್ರೀಡೆಯೊಂದು ನಮ್ಮ ಮಣ್ಣಲ್ಲಿ ಇದೆ ಎನ್ನುವುದನ್ನು ಇಂದಿನ ಯುವ ಪೀಳಿಗೆಗೆ ಅರಿವಿಲ್ಲ. ಹಿಂದೆ ಗರಡಿ ಮನೆಗಳಲ್ಲಿ ಮಲ್ಲಕಂಬ ಸರ್ವೇಸಾಮಾನ್ಯವಾಗಿ ಕಾಣಿಸುತ್ತಿತ್ತು ಅದರಲ್ಲೂ ಹೆಚ್ಚಾಗಿ ಉತ್ತರ ಭಾರತದಲ್ಲಿ ಪ್ರತಿಯೊಂದು ಗರಡಿ ಮನೆಯಲ್ಲಿ ಮಲ್ಲಕಂಬ ಆಡಲಾಗುತ್ತಿತ್ತು.

ಏನಿದು ಮಲ್ಲಕಂಬ?
ನೆಲದ ಮೇಲೆ ಮಾಡಬಹುದಾದ ಯೋಗದ ಪಟ್ಟುಗಳನ್ನು ಕಂಬದ ಮೇಲೆ ಮಾಡುವ ಸಾಹಸಿ ಕ್ರೀಡೆಯನ್ನು ಮಲ್ಲಕಂಬ ಎಂದು ಸಾಮಾನ್ಯ ಅರ್ಥದಲ್ಲಿ ಹೇಳಬಹುದು. ಮಲ್ಲಕಂಬದಲ್ಲಿ ಮೂರು ವಿಧಗಳು ಸ್ಥಿರ ಮಲ್ಲಕಂಬ, ರೋಪ್ ಮಲ್ಲಕಂಬ ಮತ್ತು ನೇತಾಡುವ ಮಲ್ಲಕಂಬ.
ಮಲ್ಲಕಂಬ ಹುಟ್ಟಿದ ಇತಿಹಾಸದ ಬಗ್ಗೆ ಒಮ್ಮೆ ತಿರುಗಿಸಿ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಮರಾಠ ಪೇಶ್ವೆಗಳ ಕಾಲದಲ್ಲಿ ಮಲ್ಲಕಂಬ ಉದಯಿಸಿತು. ಮೊದಲಿಗೆ ಮಲ್ಲಕಂಬ ಕುಸ್ತಿಯ ಒಂದು ಭಾಗವಾಗಿತ್ತು. ಹೇಗೆ ಕ್ರಿಕೆಟ್, ವಾಲಿಬಾಲ್ ಮತ್ತು ಇನ್ನಿತರ ಆಟ ಆಡುವ ಮೊದಲು ವ್ಯಾಯಾಮ ಮಾಡುತ್ತಾರಲ್ಲ ಹಾಗೆ ಕುಸ್ತಿ ಆಡುವ ಮೊದಲು ಮಲ್ಲಕಂಬ ವ್ಯಾಯಾಮದ ಭಾಗವಾಗಿತ್ತು. ಮರಾಠ ಸೈನ್ಯದಲ್ಲಿ ದೈಹಿಕ ತರಬೇತುದಾರರಾಗಿದ್ದ ದಾದಾ ಬಾಳಂಭಟ್ಟ್ ದೇವಧರ ಅವರು ಇದನ್ನು ಪ್ರಧಾನ ಕ್ರೀಡೆಯನ್ನಾಗಿ ರೂಪಿಸಬೇಕೆಂದು ಅದಕ್ಕೊಂದು ರೂಪರೇಷೆ ಕೊಟ್ಟು ಜನಪ್ರಿಯಗೊಳಿಸಿದರು.

Mallakhamb: Teaching fitness the ancient way - Telangana Todayಕರ್ನಾಟಕದಲ್ಲಿ ಮಲ್ಲಕಂಬ
ಕರ್ನಾಟಕಕ್ಕೆ ಮಲ್ಲಕಂಬ ಮೊದಲು ತಂದವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಎನ್.ಎಸ್. ಪಾಟೀಲ್. ತಮ್ಮ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಅದನ್ನು ಕಲಿಸಿ ಕರ್ನಾಟಕದಾದ್ಯಂತ ಆ ಶಿಷ್ಯರ ಮೂಲಕ ಹೆಚ್ಚು ಪ್ರಚಲಿತ ಪಡಿಸಿದರು. ಪರದೆಯ ಹಿಂದೆ ಸರಿದು ಹೋಗಿದ್ದ ಮಲ್ಲಕಂಬಕ್ಕೆ ಮತ್ತೆ ಮರು ಜೀವವನ್ನು ಕೊಟ್ಟು ಕರ್ನಾಟಕದಾದ್ಯಂತ ಹಲವಾರು ತಂಡಗಳು ಆ ಕಾಲದಲ್ಲಿ ತಲೆಯೆತ್ತಿದವು. ಕರ್ನಾಟಕ ಕೂಡ 90ರ ದಶಕದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿತು.

Wood Mallakhamb, Size/Dimension: 2400mm To 2800mmಭಾರತವೇ ಚಾಂಪಿಯನ್
ಪ್ರಸ್ತುತ ಮಲ್ಲಕಂಬ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ಸ್ಕೂಲ್ ಗೇಮ್ಸ್, ಖೇಲೋ ಇಂಡಿಯಾ ಹಾಗೂ ಇನ್ನಿತರ ರಾಷ್ಟ್ರಮಟ್ಟದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಸೇರ್ಪಡೆಗೊಂಡಿದೆ. ಎಲ್ಲಕ್ಕಿಂತ ಮಿಗಿಲಾಗಿ ಈವರೆಗೆ ನಡೆದ ಎರಡು ವಿಶ್ವ ಮಲ್ಲಕಂಬ ಚಾಂಪಿಯನಶಿಪ್ ಸ್ಪರ್ಧೆಯಲ್ಲಿ ಭಾರತವೇ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪ್ರಸ್ತುತ ವಿಶ್ವದ 20ಕ್ಕೂ ಹೆಚ್ಚು ದೇಶಗಳಲ್ಲಿ ಮಲ್ಲಕಂಬ ಪ್ರಚಲಿತವಾಗಿದೆ.

Mallakhamb Innovatorsಮಲ್ಲಕಂಬ ತರಬೇತಿಗೆ ಪ್ರೋತ್ಸಾಹ 
ಇನ್ನೊಂದು ಪ್ರಮುಖ ಸಂಗತಿ ಎಂದರೆ ಮಲ್ಲಕಂಬ ಕೇವಲ ಕ್ರೀಡೆಯಾಗಿ ಮಾತ್ರ ಗುರುತಿಸಿಕೊಳ್ಳದೆ ಸಾಂಸ್ಕೃತಿಕ ನೆಲೆಗಟ್ಟನ್ನು ಕೂಡ ಇತ್ತೀಚಿಗೆ ಕಂಡುಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹ ತಮ್ಮ
ಕೆಲವು ಭಾಷಣಗಳಲ್ಲಿ ಈ ಕ್ರೀಡೆ, ಕ್ರೀಡಾಪಟುಗಳ ಕುರಿತು ಉಲ್ಲೇಖಿಸಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳು ಮಲ್ಲಕಂಬ ತರಬೇತಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಜೊತೆಗೆ ಪ್ರತಿ ವರ್ಷ ಜೂನ್ 15ರಂದು ಅಂತಾರಾಷ್ಟ್ರೀಯ ಮಲ್ಲಕಂಬ ದಿನವಾಗಿ ಆಚರಿಸಲಾಗುತ್ತಿದೆ.

What is Mallakhamb History Rules How to Play - Fall in Sportsಜಿಮ್‌ಗಿಂತ ಮಲ್ಲಕಂಬ ಲೇಸು
ಮಲ್ಲಕಂಬದ ಉಪಯೋಗಗಳು ಮಲ್ಲಕಂಬ ಮಾಡುವುದರಿಂದ ದೇಹ ಸರ್ವಾಂಗ ಸುಂದರಗೊಳ್ಳುತ್ತದೆ, ಯಾವ ಆಧುನಿಕ ಜಿಮ್ಮಿಗೆ ಹೋದರೂ ಆಗಲಾರದ ದುಪ್ಪಟ್ಟು ಲಾಭಗಳು ಮಲ್ಲಕಂಬದಿಂದ ಆಗುತ್ತವೆ. ಅದು ಯಾವುದೇ ಅಡ್ಡ ಪರಿಣಾಮವಿಲ್ಲದೆ. ಅಲ್ಲದೆ ಏಕಾಗ್ರತಾ ಶಕ್ತಿ ಮತ್ತು ದುಶ್ಚಟ ರಹಿತ ದೇಹಕ್ಕಾಗಿ ಇದು ಸಹಕಾರಿ. ಹಾಗೆಯೇ ಆರೋಗ್ಯ ಜೀವನವನ್ನು ಕಂಡುಕೊಳ್ಳಬಹುದು.

ವಿಶ್ವ ಮಲ್ಲಕಂಬ: ಭಾರತಕ್ಕೆ ಪ್ರಶಸ್ತಿಶರೀರ ಸದೃಢತೆಗೆ, ಏಕಾಗ್ರತೆಗೆ, ಕ್ಷಾತ್ರಭಾವದ ಜಾಗೃತಿಗೆ ಪೂರಕವಾಗಿರುವ ಮಲ್ಲಕಂಬದ ಮಹಿಮೆ ಗ್ರಾಮೀಣವೂ ಸೇರಿದಂತೆ ನಗರ ಪ್ರದೇಶಗಳಲ್ಲಿ ವಿಸ್ತರಿಸಲಿ. ಮಲ್ಲಕಂಬದ ಮಲ್ಲರ ಸಂತತಿ ವೃದ್ಧಿಯಾಗಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!