ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ವತಿಯಿಂದ 7ನೇ ರಾಜ್ಯ ಸಮ್ಮೇಳನ

ಹೊಸದಿಗಂತ ವರದಿ ಹುಬ್ಬಳ್ಳಿ:

ಕೆಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ವತಿಯಿಂದ ಹುಬ್ಬಳ್ಳಿಯಲ್ಲಿ ಕಳೆದ 23 ವರ್ಷದ ಬಳಿಕ ಮತ್ತೆ 7ನೇ ರಾಜ್ಯ ಸಮ್ಮೇಳನ ಡಿ.8,9,10 ರಂದು ಹಮ್ಮಿಕೊಳ್ಳಲಾಗಿದೆ ಎಂದು ಆರ್.ಎಫ್ ಕವಳಿಕಾಯಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ನಾಲ್ಕು ವರ್ಷಕೊಮ್ಮೆ ಸಮ್ಮೇಳನ ಮಾಡಲಾಗುತ್ತಿದೆ. ಕಳೆದ ಬಾರಿ ಗುಲಬರ್ಗಾದಲ್ಲಿ ನಡೆಸಲಾಗುತ್ತಿದೆ. ಡಿ. 8 ರಂದು 10.30 ಕ್ಕೆ ಹೊಸರು ವೃತ್ತದ ಗಾಳಿ ದುರ್ಗಮ್ಮ ದೇವಿ ದೇವಸ್ಥಾನ ದಿಂದ ಮೆರವಣಿಗೆ ಆರಂಭವಾಗಿ ನೆಹರು ಮೈದಾನ ತಲುಪಲಿದೆ. ಬಳಿಕ ಅಲ್ಲಿಯೇ ಬಹಿರಂಗ ಸಭೆ ಏರ್ಪಡಿಸಲಾಗಿದ್ದು, ಕೆಎಸ್ಆರ್ಟಿ‌ಸಿ ಎಸ್ ಹಾಗೂ ಡಬ್ಲ್ಯೂಎಫ್ ಸಂಪಾದಕ ಸಿದ್ದನಗೌಡ ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆ ಕೆಎಸ್ಆರ್ ಟಿಸಿ ಎಸ್ ಹಾಗೂ ಡಬ್ಲ್ಯೂ ಎಫ್ ಉಪಾಧ್ಯಕ್ಷ ಆರ್.ಎಫ್ ಕವಳಿಕಾಯಿ, ಮಾಜಿ ಸಚಿವ ಎಂ.ಎಂ. ಹಿಂಡಸಗೇರಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಸಾಹಿತಿ‌ ಎಸ್.ವಿ. ಪಟನಶೆಟ್ಟಿ ಭಾಗವಹಿಸುವರು. ರಾಜ್ಯಾದ್ಯಂತ 5,000 ಸಾವಿರ ನೌಕರರು ಭಾಗವಹಿಸುತ್ತಾರೆ ಎಂದರು.

ಈ ಬಹಿರಂಗ ಸಭೆಯಲ್ಲಿ ಸಂಸ್ಥೆ ಪುನಃಚೇತನ, ನೌಕರರ ವೇತನ ಪರಿಷ್ಕರಣೆ, ನೌಕರರ ನೇಮಕಾತಿ ಸೇರಿದಂತೆ ಅನೇಕ ಬೇಡಿಕೆ ಕುರಿತು ಚರ್ಚಿಸಿ ಸರ್ಕಾರ ಗಮನ ಹರಿಸುವಂತೆ ಮಾಡಲು ಒತ್ತಡ ಹಾಕುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎ‌ಂದರು.

ಬಳಿಕ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಸಂಜೆ 4 ಗಂಟೆಗೆ ಪ್ರತಿನಿಧಿಗಳ ಸಭೆ ನಡೆಯಲಿದೆ. 500 ನೌಕರರು ಸಭೆಯಲ್ಲಿ ಭಾಗವಹಿಸುವರು. ಕೆಎಸ್ಆರ್ ಟಿಸಿ ಎಸ್ ಹಾಗೂ ಡಬ್ಲ್ಯೂ ಫೆಡರೇಶನ್ ಅಧ್ಯಕ್ಷ ಹೆಚ್.ವಿ‌. ಅನಂತ ಸುಬ್ಬರಾವ್, ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಭಾಗವಹಿಸುವರು ಎಂದು ತಿಳಿಸಿದರು.

ಫೇಡರೇಶನ್ ರಾಜ್ಯ ಖಜಾಂಚಿ ಎಚ್. ಚಂದ್ರಗೌಡರ ಎ.ಸಿ.ಕುಲಕರ್ಣಿ, ಎಂ.ವಿ ಭಗವತಿ, ಆನಂದ ಪೈ ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!