ಗರುಡ ಗಮನ ವೃಷಭ ವಾಹನ: ರಿಲೀಸ್ ಆದ ಮೂರೇ ದಿನಕ್ಕೆ ಒಟಿಟಿಯಲ್ಲಿ ದಾಖಲೆ ಸೃಷ್ಟಿಸಿದ ಚಿತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ಹಾಗೂ ರಾಜ್ ಬಿ.ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಒಟಿಟಿಯಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಮನಗೆದಿದ್ದ ಚಿತ್ರ ಜ.13ರಿಂದ ಒಟಿಟಿಯಲ್ಲಿ ರೀಲಸ್ ಆಯಿತು. ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಪಡೆದುಕೊಂಡಿದೆ.
ಒಟಿಟಿಯಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಮೊದಲ ಚಿತ್ರ ಭಜರಂಗಿ 2. ಇದು ಮೂರು ದಿನಗಳಲ್ಲಿ 5 ಕೋಟಿ ವೀಕ್ಷಣೆ ಪಡೆದಿತ್ತು. ಆದರೆ ಈಗ ಗರುಡ ಗಮನ ವೃಷಭ ವಾಹನ ಚಿತ್ರ ಭಜರಂಗಿ 2 ಚಿತ್ರವನ್ನು ಹಿಂದಿಕ್ಕಿದೆ.
ಒಂದು ಮೊಟ್ಟೆಯ ಕಥೆ’ ನಂತರ ರಾಜ್ ಬಿ. ಶೆಟ್ಟಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ರೌಡಿಸಂ ಅನ್ನು ಹಿನ್ನೆಲೆಯಾಗಿಸಿ ಚಿತ್ರ ಮಾಡಲಾಗಿದೆ. ಕಾಫಿ ಗ್ಯಾಂಗ್​ ಸ್ಡುಡಿಯೋ, ಲೈಟರ್​ ಬುದ್ಧ ಫಿಲ್ಮ್ಸ್​ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಮಿಥುನ್​ ಮುಕುಂದನ್​ ಸಂಗೀತ, ಪ್ರವೀಣ್​ ಶ್ರಿಯಾನ್ ಛಾಯಾಗ್ರಹಣ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!