Wednesday, June 7, 2023

Latest Posts

ಸಿದ್ದರಾಮಯ್ಯ, ಡಿಕೆಶಿ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರು ಇವರೇ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ನು ಕೆಲವೇ ಕ್ಷಣಗಳಲ್ಲಿ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜತೆಗೆ ಇನ್ನೂ ಎಂಟು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಈ ಎಂಟು ಸಚಿವರು ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆ ಎಂಟು ಮಂದಿಯ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಶುಕ್ರವಾರ ರಾತ್ರಿಯವರೆಗೂ ದೆಹಲಿಯಲ್ಲಿದ್ದು, ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಸಚಿವರ ಹೆಸರು ಹಾಗೂ ಇಲಾಖೆಗಳ ಹಂಚಿಕೆ ಕುರಿತು ಪಕ್ಷದ ಹೈಕಮಾಂಡ್ ಜತೆ ಚರ್ಚಿಸಲಾಗಿದೆ. ಚರ್ಚೆಯ ನಂತರ ಪಕ್ಷದ ನಾಯಕತ್ವವು ಮೊದಲ ಹಂತದಲ್ಲಿ ಎಂಟು ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡಲು ಅಂತಿಮ ನಿರ್ಧಾರಕ್ಕೆ ಬಂದಿತು. ಸಿದ್ಧರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಎಂಡು ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೊದಲ ಎಂಟು ಮಂದಿ ಸಚಿವರ ಪಟ್ಟಿ ಇಲ್ಲಿದೆ

  1. ಜಿ.ಪರಮೇಶ್ವರ್
  2. ಕೆ.ಎಚ್.ಮುನಿಯಪ್ಪ
  3. ಕೆ.ಜೆ.ಜಾರ್ಜ್
  4. ಎಂ.ಬಿ.ಪಾಟೀಲ್
  5. ಸತೀಶ್ ಜಾರಕಿಹೊಳಿ
  6. ಪ್ರಿಯಾಂಕ್ ಖರ್ಗೆ
  7. ರಾಮಲಿಂಗಾ ರೆಡ್ಡಿ
  8. ಜಮೀರ್ ಅಹಮದ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!