ಅಮೆರಿಕಾದಲ್ಲಿ ನಿಲ್ಲದ ಗುಂಡಿನ ದಾಳಿ: ವಾರಾಂತ್ಯದಲ್ಲಿ ಅಸುನೀಗಿದವರ ಸಂಖ್ಯೆ ಎಷ್ಟು ಗೊತ್ತಾ..?

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಅಮೆರಿಕಾದ ಚಿಕಾಗೋ ನಗರದಲ್ಲಿ ಈ ವೀಕೆಂಡ್‌ನಲ್ಲಿ ಹಲವಾರು ಗುಂಡಿನ ದಾಳಿ ನಡೆದಿವೆ. ಪ್ರತ್ಯೇಕ ಘಟನೆಗಳಲ್ಲಿ ನಡೆದ ದಾಳಿಯಲ್ಲಿ ಸುಮಾರು 8ಜನ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಎನ್‌ಬಿಸಿ ಚಿಕಾಗೋದಲ್ಲಿರುವ ಸೌತ್ ಕಿಲ್‌ಪ್ಯಾಟ್ರಿಕ್‌ನ ನಿವಾಸದಲ್ಲಿ ಶುಕ್ರವಾರ ಸಂಜೆ 5:45ಕ್ಕೆ 69 ವರ್ಷದ ವ್ಯಕ್ತಿಯೊಬ್ಬರು ಗುಂಡು ಹಾರಿಸಿರುವುದಾಗಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ 8ಮಂದಿ ಅಸುನೀಗಿರುವುದಾಗಿ ತಿಳಿದುಬಂದಿದೆ. ಬ್ರೈಟನ್ ಪಾರ್ಕ್, ಸೌತ್ ಇಂಡಿಯಾನಾ, ನಾರ್ತ್ ಕೆಡ್ಜಿ ಅವೆನ್ಯೂ, ಹಂಬೋಲ್ಟ್ ಪಾರ್ಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ಘಟನೆಗಳು ನಡೆದಿವೆ ಎಂದು ವರದಿಯಾಗಿವೆ.

ಕಳೆದ ವಾರಾಂತ್ಯದಲ್ಲಿ ಎಂಟು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ನಗರದಾದ್ಯಂತ ಬಂದೂಕು ಹಿಂಸಾಚಾರದಲ್ಲಿ 42 ಜನರು ಗಾಯಗೊಂಡಿದ್ದಾರೆ. ಇಂತಹ ಹಿಂಸಾಚಾರದ ಘಟನೆಗಳು ಯುಎಸ್‌ನಾದ್ಯಂತ ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದ ಎಂದು ಅಲ್ಲಿನ ಜನ ಕಳವಳ ವ್ಯಕ್ತಪಡಿಸಿದ್ದಾರೆ. ಗನ್ ವಯಲೆನ್ಸ್ ಆರ್ಕೈವ್, ಸಂಶೋಧನಾ ಗುಂಪು ಪ್ರಕಾರ, 2022 ರಲ್ಲಿ ಇದುವರೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 140 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ ಎಂದಿದ್ದಾರೆ. ಈ ಘಟನೆಗಳನು ಹತ್ತಿಕ್ಕಲು ಬಿಡೆನ್ ಆಡಳಿತಹೊಸ ಕ್ರಮಗಳನ್ನು ಅನಾವರಣಗೊಳಿಸುತ್ತಿದೆ ಎಂಬ ಸುದ್ದಿ ಕೂಡಾ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!