ಪಿಎಂ ಮುದ್ರಾ ಯೋಜನೆಗೆ 8 ವರ್ಷ: ಇಲ್ಲಿಯವರೆಗೆ ಸಾಧಿಸಿದ್ದೇನು?- ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಸಣ್ಣ ಉದ್ದಿಮೆಗಳಿಗೆ ಹಣಕಾಸು ಸಹಾಯ ಒದಗಿಸಿ ಅವುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 2015ರ ಏಪ್ರಿಲ್‌ 8 ರಂದು ಜಾರಿಗೆ ತರಲಾದ ಪ್ರಧಾನಮಂತ್ರಿ ಮುದ್ರಾ ಯೋಜನೆಯು ಇಂದಿಗೆ 8 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ಎಂಟು ವರ್ಷಗಳಲ್ಲಿ ಮುದ್ರಾ ಯೋಜನೆಯ ಅಡಿಯಲ್ಲಿ ಎಷ್ಟು ಸಾಲ ನೀಡಲಾಗಿದೆ, ಪಲಾನುಭವಿಗಳೆಷ್ಟಿದ್ದಾರೆ ಎಂಬುದರ ಕುರಿತಾಗಿನ ಮಾಹಿತಿಯನ್ನ ಸರ್ಕಾರ ಹಂಚಿಕೊಂಡಿದೆ.

2015ರಲ್ಲಿ ಜಾರಿಗೆ ತರಲಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಇದುವರೆಗೆ ಒಟ್ಟೂ 23.2 ಲಕ್ಷ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದ್ದು ಒಟ್ಟಾರೆಯಾಗಿ 40.82 ಕೋಟಿ ಫಲಾನುಭವಿಗಳು ಮುದ್ರಾಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಅಂಕಿಅಂಶಗಳು ತೋರಿಸಿವೆ.

ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದು “ಒಟ್ಟಾರೆ ಫಲಾನುಭವಿ ಖಾತೆಗಳಲ್ಲಿ 68 ಶೇಕಡಾದಷ್ಟು ಮಹಿಳಾ ಖಾತೆಗಳಿವೆ. ಅದರಲ್ಲಿ 51 ಪ್ರತಿಶತ ಖಾತೆಗಳು ಪರಿಶಿಷ್ಟಜಾತಿ – ಪರಿಶಿಷ್ಟಪಂಗಡಗಳು ಮತ್ತುಇತರ ಹಿಂದುಳಿದ ವರ್ಗಗಳಿಗೆ ಸೇರಿವೆ. ಮುದ್ರಾ ಯೋಜನೆಯು ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಇವು ಸ್ಥಳೀಯ ಬೆಳವಣಿಗೆಗೆ ಕಾರಣವಾಗಿವೆ. MSME ಗಳ ಬೆಳವಣಿಗೆಯು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಪ್ರಬಲ ದೇಶೀಯ ಎಂಎಸ್‌ಎಂಇಗಳು ದೇಶೀಯ ಮಾರುಕಟ್ಟೆಗಳಿಗೆ ಮತ್ತು ರಫ್ತಿಗೆ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗುತ್ತವೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!