SHOCKING | ಆಫ್ಘನ್‌ನಲ್ಲಿ 80 ಬಾಲಕಿಯರಿಗೆ ವಿಷಪ್ರಾಶನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತೀವ್ರ ವಿರೋಧವಿದ್ದು, ಆರನೇ ತರಗತಿವರೆಗೆ ಮಾತ್ರ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಾಗಿದೆ.

ಹೆಣ್ಣುಮಕ್ಕಳ ಸ್ವಾತಂತ್ರ್ಯದ ಮೇಲೆ ಕಣ್ಣಿಟ್ಟಿರುವ ಆಫ್ಘನ್‌ನಲ್ಲಿ ಹೆಣ್ಣುಮಕ್ಕಳಿಗೆ ವಿಷ ಪ್ರಾಶನ ಮಾಡಿಸಿ ವಿದ್ಯಾಭ್ಯಾಸದಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ. ಉತ್ತರದ ಸರ್ ಎ ಪುಲ್ ಪ್ರಾಂತ್ಯದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಊಟಕ್ಕೆ ವಿಷ ಹಾಕಿದ್ದು, ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ.

1-6 ನೇ ತರಗತಿವರೆಗಿನ ಮಕ್ಕಳ ಊಟಕ್ಕೆ ವಿಷ ಹಾಕಿದ್ದು, ೮೦ಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥರಾಗಿದ್ದಾರೆ. ಅವರ ಊಟದಲ್ಲಿ ವಿಷ ಹಾಕಿದ್ದು ಯಾರು ಹಾಗೂ ಯಾಕಾಗಿ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಹಿಂದೆ ಆಫ್ಘನ್ ಶಾಲೆಯಲ್ಲಿ ವಿಷಕಾರಿ ಹೊಗೆ ಬಿಟ್ಟು ಮಕ್ಕಳು ಅಸ್ವಸ್ಥರಾಗುವಂತೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!