INTRESTING | ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 85 ಮಂದಿಯಿಂದ ಒಂದೇ ಸಮಯಕ್ಕೆ ಮತದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿಕ್ಕಬಳ್ಳಾಪುರದಲ್ಲಿ 85 ಮಂದಿ ಒಂದೇ ಸಮಯಕ್ಕೆ ಮತದಾನ ಮಾಡೋಕೆ ಬಂದಿದ್ದಾರೆ. ಅದರಲ್ಲಿ ಸ್ಪೆಶಲ್‌ ಏನಂತೀರಾ? ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು.

ಹೌದು, ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ ವಾರ್ಡ್ ನಂಬರ್ 19ರ ನಿವಾಸಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ 85 ಮಂದಿ ಒಂದೇ ಸಮಯಕ್ಕೆ ಮತದಾನ ಮಾಡಿದ್ದಾರೆ. ಪ್ರತೀ ವರ್ಷ ಯಾವುದೇ ವೋಟಿಂಗ್‌ ಇದ್ದರೂ ಕುಟುಂಬದ ಎಲ್ಲರೂ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಾರೆ.

ಬೇರೆ ಊರುಗಳಲ್ಲಿ ಕುಟುಂಬ ಡಿವೈಡ್‌ ಆಗಿದ್ದರೂ, ವೋಟರ್‌ ಐಡಿ ಟ್ರಾನ್ಸ್‌ಫರ್‌ ಮಾಡಿಕೊಳ್ಳದೆ ಪ್ರತಿ ಬಾರಿ ಊರಿಗೆ ಬಂದು ಒಟ್ಟಿಗೇ ಮತದಾನ ಮಾಡೋದು ಬಾದಾಮ್‌ ಫ್ಯಾಮಿಲಿ ಸ್ಪೆಶಾಲಿಟಿ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!