ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೆಮೆನ್‌ನ ರಾಜಧಾನಿ ಸಹಾದಲ್ಲಿ ರಂಜಾನ್ ಆಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಉಂಟಾಗಿದ್ದು, 85 ಕ್ಕೂ ಅಧಿಕರು ಮೃತಪಟ್ಟಿದ್ದಾರೆ.
ಆರ್ಥಿಕ ನೆರವು ನೀಡಲು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು, ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ನೆರೆದಿದ್ದರು. ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿದ್ದರು. ಜನರ ನಿಯಂತ್ರಣಕ್ಕಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಗುಂಡು ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡಿದ್ದು, ಏಕಾಏಕಿ ಜನ ಭಯಭೀತರಾಗಿದ್ದಾರೆ. ಭಯದಿಂದ ಓಡಿದ್ದು, ಕೆಳಗೆ ಬಿದ್ದವರನ್ನೂ ಗಮನಿಸದೆ ತುಳಿದು ಓಡಿದ್ದಾರೆ. ಒಟ್ಟಾರೆ 100 ಮಂದಿ ಗಾಯಗೊಂಡಿದ್ದು, 13 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಸ್ಥಳೀಯ ಆಡಳಿತದ ಸಹಾಯವಿಲ್ಲದೆ ವ್ಯಾಪಾರಿಗಳು ಕಾರ್ಯಕ್ರಮ ಆಯೋಜಿಸಿದ್ದು, ಆಯೋಜಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.