ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮುದ್ದೆ ಜೊತೆ ಮೆನ್ಯುನಲ್ಲಿ ಏನೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರದ ಬೇಡಿಕೆಯ ನಡುವೆಯೇ ಕನ್ನಡ ಸಾಹಿತ್ಯ ಪರಿಷತ್ತು (ಕೆಎಸ್‌ಪಿ) ಆಯೋಜಕರು ಕರ್ನಾಟಕದಾದ್ಯಂತ ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸಸ್ಯಾಹಾರ ನೀಡಲು ಸಜ್ಜಾಗಿದೆ.

ಮೂರು ದಶಕಗಳ ನಂತರ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಕನ್ನಡ ಸಮ್ಮೇಳನಕ್ಕೆ ಸಂಘಟಕರು 120 ಆಹಾರ ಕೌಂಟರ್‌ಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಸಮ್ಮೇಳನದ ವೇಳೆ ಮಾಂಸಾಹಾರ ನೀಡುವಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಬೇಡಿಕೆ ಕೂಡ ಬಂದಿದೆ. ಮಂಡ್ಯದಲ್ಲಿ ಮುದ್ದೆ, ಮಟನ್‌ ಸಾಂಬಾರ್‌ ಹಾಗೂ ಚಿಕನ್‌ ಖಾದ್ಯಗಳು ಫೇಮಸ್‌ ಆಗಿದ್ದು, ಅದನ್ನು ನೀಡಿ ಎಂದು ಜನ ಪ್ರತಿಭಟನೆ ಕೂಡ ನಡೆಸಿದ್ದಾರೆ.

120 ಕೌಂಟರ್‌ಗಳಲ್ಲಿ 2,000 ಕ್ಕೂ ಹೆಚ್ಚು ಜನರಿದ್ದು, 1,200 ಅಡುಗೆಯವರು ಇರುತ್ತಾರೆ ಎಂದು ಕೆಎಸ್‌ಪಿ ಮೂಲಗಳು ತಿಳಿಸಿವೆ. ರಾಗಿ ಮುದ್ದೆ, ಕಾಳು ಪಲ್ಯ, ಅವರೆ ಕಾಳು ಸಾರು, ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ರಾಗಿ ದೋಸೆ, ಟೊಮೆಟೊ ರೈಸ್ ಬಾತ್, ತಟ್ಟೆ ಇಡ್ಲಿ, ವಡೆ, ಅಕ್ಕಿ ರೊಟ್ಟಿ, ಸಿಹಿತಿಂಡಿಗಳಲ್ಲಿ ಕಾಯಿ ಹೋಳಿಗೆ ಹೀಗೆ ಹಲವು ಖಾದ್ಯಗಳನ್ನು ನೀಡಲಾಗುವುದು.

ಆಹಾರ ಕೌಂಟರ್‌ಗಳು ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ತೆರೆದಿರುತ್ತವೆ. ಮಾಂಸಾಹಾರಕ್ಕೆ ಬೇಡಿಕೆ ಇದ್ದರೂ, ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಗಾಗಿ ಸಂಘಟಕರು ಸಸ್ಯಾಹಾರವನ್ನು ಮಾತ್ರ ಬಡಿಸುವ ಸಾಧ್ಯತೆಯಿದೆ. ಈ ಹಿಂದೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನಗಳಲ್ಲಿ ಮಾಂಸಾಹಾರಿ ಆಹಾರವನ್ನು ನೀಡಲಾಗಿಲ್ಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!