ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಚ್ಚಿಟ್ಟಿದ್ದ ಬಾಂಬ್ ಸ್ಫೋಟದಿಂದ ಮಾಸ್ಕೋದಲ್ಲಿ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ರಷ್ಯಾದ ಹಿರಿಯ ಜನರಲ್ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಇಂದು ಮೃತಪಟ್ಟಿದ್ದಾರೆ.
ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ಸಂರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಅವರು ಕ್ರೆಮ್ಲಿನ್‌ನಿಂದ ಆಗ್ನೇಯಕ್ಕೆ 7 ಕಿ.ಮೀ ದೂರದಲ್ಲಿರುವ ರಿಯಾಜಾನ್ಸ್ಕಿ ಪ್ರಾಸ್ಪೆಕ್ಟ್‌ನಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡದ ಬಳಿ ಬಾಂಬ್ ದಾಳಿಯಿಂದ ಮೃತರಾಗಿದ್ದಾರೆ.
ಜನರಲ್ ಕಿರಿಲ್ಲೋವ್ ಅವರ ಸಹಾಯಕ ಸಹ ಈ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಮಯದಲ್ಲಿ ನಿಷೇಧಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿದ್ದಕ್ಕಾಗಿ ಕಿರಿಲ್ಲೋವ್‌ಗೆ ಉಕ್ರೇನಿಯನ್ ನ್ಯಾಯಾಲಯ ಸೋಮವಾರ ಗೈರುಹಾಜರಿ ಶಿಕ್ಷೆ ವಿಧಿಸಿತ್ತು.