ಖುಲಾಯಿಸಿದ ವೃದ್ಧನ ಅದೃಷ್ಟ: 88ರ ಹರೆಯದಲ್ಲಿ 5 ಕೋಟಿ ಗೆದ್ದ ತಾತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ನ ಮೊಹಾಲಿ ಜಿಲ್ಲೆಯ ತ್ರಿವೇದಿ ಕ್ಯಾಂಪ್ ಗ್ರಾಮದಲ್ಲಿ ಮಹಂತ್ ದ್ವಾರಕಾದಾಸ್ ಎಂಬ ವೃದ್ಧನ ಅದೃಷ್ಟ ಖುಲಾಯಿಸಿದೆ. ಟ್ರೈ ಟ್ರೈ ಟ್ರೈ ಎಗೈನ್‌ ಎಂಬ ಫಾರ್ಮುಲಾ ಅನುಸರಿಸಿದ ತಾತ ಕಳೆದ  40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಆದರೆ ಇಲ್ಲಿವರೆಗೂ ಅದೃಷ್ಟ ಅವರ ಹತ್ತಿರವೂ ಸುಳಿಯಲಿಲ್ಲ. ಆದರೆ ಇದೀಗ ದ್ವಾರಕಾ ದಾಸ್ ಖರೀದಿಸಿದ ಲಾಟರಿ ಟಿಕೆಟ್ ಜಾಕ್ ಪಾಟ್ ಹೊಡೆದಿದೆ.

ದ್ವಾರಕಾ ದಾಸ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಲೋಹ್ರಿ (ಸಂಕ್ರಾಂತಿ ಹಬ್ಬ) ದಿನದಂದು 5 ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ. ದ್ವಾರಕಾದಾಸ್ ತಾನು ಗೆದ್ದ ಹಣವನ್ನು ತನ್ನ ಇಬ್ಬರು ಗಂಡುಮಕ್ಕಳಿಗೆ ಸಮನಾಗಿ ಹಂಚುವುದಾಗಿ ಹೇಳಿದ್ದಾರೆ. ಲಾಟರಿ ಫಲಿತಾಂಶ ದ್ವಾರಕಾ ದಾಸ್ ಅವರು ಜನವರಿ 16 ರಂದು ಘೋಷಿಸಲಾದ 5 ಕೋಟಿ ರೂ.ಗಳ ಜಾಕ್‌ಪಾಟ್ ಗೆದ್ದಿದ್ದಾರೆ ಎಂದು ಲಾಟರಿ ಸಹಾಯಕ ನಿರ್ದೇಶಕ ಕರಮ್ ಸಿಂಗ್ ಹೇಳಿದ್ದಾರೆ. 30ರಷ್ಟು ತೆರಿಗೆ ಕಡಿತಗೊಳಿಸಿ ಉಳಿದ ಹಣವನ್ನು ವಿಜೇತರಿಗೆ ನೀಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!