ದಿನಭವಿಷ್ಯ | ಸಂತೋಷದ ದಿನ: ವೃತ್ತಿಯಲ್ಲಿ, ವ್ಯವಹಾರದಲ್ಲಿ ನಿಮ್ಮ ಊಹೆಗಳು ನಿಜವಾಗಲಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಆರ್ಥಿಕ ಪರಿಸ್ಥಿತಿಯ ಪರಾಮರ್ಶೆ ನಡೆಸಿ. ಕೆಲವು ತಪ್ಪು ಸರಿಪಡಿಸಬೇಕು. ಕೌಟುಂಬಿಕ ಸಮಸ್ಯೆಯೊಂದು ಪರಿಹಾರ .

ವೃಷಭ
ಪ್ರೀತಿಯ ವಿಷಯದಲ್ಲಿ ಮಹತ್ತರ ಬೆಳವಣಿಗೆ.  ಆಪ್ತರೊಂದಿಗಿನ ಸಂಬಂಧ ಗಾಢ ವಾಗಲಿದೆ. ಹಿರಿಯರ ಕಿವಿಮಾತಿಗೆ  ಮನ್ನಣೆ ನೀಡಿರಿ.

ಮಿಥುನ
ಸಮಸ್ಯೆ ಬಗೆಹರಿಸುವಲ್ಲಿ ವಿನಯವಂತಿಕೆ ತೋರುವಿರಿ. ಆದರೆ ಅದು ಫಲ ನೀಡದು. ಕೆಲವಿಷಯಗಳಲ್ಲಿ ಕಠಿಣ ನಿಲುವು ಅಗತ್ಯ. ಅದರಂತೆ ನಡೆಯಿರಿ.

ಕಟಕ
ಕುಟುಂಬದಲ್ಲಿ ನಿಮ್ಮ ಮಾತು ಕೇಳುತ್ತಿಲ್ಲ ಎಂಬ ಕೊರಗು ಕಾಡೀತು. ಮೊದಲು ನಿಮ್ಮ ಅಹಂ ಬಿಡಿ. ಇತರರ ಏಳಿಗೆಯನ್ನು  ಮೆಚ್ಚಲು ಕಲಿಯಿರಿ.

ಸಿಂಹ
ದೇವರು ಎಲ್ಲವನ್ನು ನಿಮಗೆ ಕೊಟ್ಟಿದ್ದಾನೆ ಎಂಬ ಸಂತೃಪ್ತ ಭಾವ ಇಂದು ತುಂಬಲಿದೆ. ಎಲ್ಲವೂ ಸರಿಯಾಗಿದೆ ಎಂಬಂತಹ ಧನ್ಯತೆ. ಆಪ್ತರ ಜತೆ ಕಾಲಕ್ಷೇಪ.

ಕನ್ಯಾ
ಮಾನಸಿಕ ಒತ್ತಡ. ಸಣ್ಣ ಒತ್ತಡವೂ ನಿಮಗೆ ಬೆಟ್ಟದಷ್ಟೆನಿಸುವುದು. ಸಣ್ಣ ಸಮಸ್ಯೆಯನ್ನು ನೀವಾಗಿ ಹಿಗ್ಗಿಸುವಿರಿ.  ಭಾವನೆಯ ಮೇಲೆ ನಿಯಂತ್ರಣ ಸಾಧಿಸಿ

ತುಲಾ
ಇತರರ ಮೇಲೆ ಮೇಲುಗೈ ಸಾಧಿಸಬೇಕೆಂಬ ಹಂಬಲ. ಅದನ್ನಷ್ಟೆ ಸಾಧಿಸಲು ಹುಚ್ಚು ಕಟ್ಟಬೇಡಿ. ಅದರಿಂದ ನಿಮಗೆ ಹಾನಿಯೇ ಆದೀತು.

ವೃಶ್ಚಿಕ
ಕೋಪತಾಪ ಏರುವ ಸಾಧ್ಯತೆಯಿದೆ. ಪರಿಸ್ಥಿತಿ ನಿಮ್ಮ ಪರವಾಗಿ ಇಲ್ಲದಿರುವುದು ಅದಕ್ಕೆ ಕಾರಣ. ಸಂಜೆ ವೇಳೆ ಮನಸ್ಸು ಸ್ಥಿಮಿತಕ್ಕೆ ಬರುವುದು.

ಧನು
ಧಾರ್ಮಿಕ ವಿಚಾರ ಗಳಲ್ಲಿ ಇಂದು ಹೆಚ್ಚು ಮನಸ್ಸು ವಾಲುವುದು. ಅದಕ್ಕೆ ಕಾರಣ ನಿಮ್ಮ ಸುತ್ತ ಕಾಣಬರುವ ಕಷ್ಟಕೋಟಲೆ. ಮನಶ್ಯಾಂತಿ ಬಯಸುವಿರಿ.

ಮಕರ
ಸಂತೋಷದ ದಿನ. ವೃತ್ತಿಯಲ್ಲಿ, ವ್ಯವಹಾರದಲ್ಲಿ ನಿಮ್ಮ ಊಹೆಗಳು ನಿಜವಾಗುತ್ತವೆ. ಕೌಟುಂಬಿಕ ಅಶಾಂತಿ ನಿವಾರಣೆ.

ಕುಂಭ
ನಿಮ್ಮ ಮನಸ್ಥಿತಿ ಇಂದು ಸಹಜವಾಗಿರುವುದಿಲ್ಲ. ಆತಂಕ, ಅಸಹನೆ, ದುಗುಡ ಎಲ್ಲವೂ ಮೇಳೈಸಿದ ಸ್ಥಿತಿ. ವೃತ್ತಿಯಲ್ಲಿ ಏರುಪೇರು ಕಾಡುವುದು.

ಮೀನ
ನಿಮ್ಮ ವ್ಯವಹಾರದಲ್ಲಿ ಉತ್ತಮ ಸಾಧನೆ ತೋರುವಿರಿ. ಇತರರ ಮೆಚ್ಚುಗೆ ಲಭ್ಯ. ಕೌಟುಂಬಿಕ ಪರಿಸ್ಥಿತಿ ಆಹ್ಲಾದಕರ. ಒಟ್ಟಿನಲ್ಲಿ ನಿಮಗೆ ಸುದಿನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!