ಅಮೃತಯಾತ್ರೆ: ವಿದೇಶೀ ವಿನಿಮಯ ಸಂಗ್ರಹದಲ್ಲಿ ಹೆಚ್ಚಳ, ಜಗತ್ತಿನಲ್ಲಿಯೇ 4 ನೇ ಸ್ಥಾನದಲ್ಲಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಭಾರತದ ವಿದೇಶೀ ವಿನಿಮಯ ಸಂಗ್ರಹದಲ್ಲಿ ಹೆಚ್ಚಳ ಸಾಧಿಸಿ ಜಗತ್ತಿನಲ್ಲಿ 4 ನೇ ಸ್ಥಾನ ಗಳಿಸಿಕೊಂಡಿರುವ ಸಾಧನೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಪ್ರಸ್ತುತ ಸಮಯದಲ್ಲಿ ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದರೆ ವಿದೇಶಿ ವಿನಿಮಯ ಸಂಗ್ರಹದಲ್ಲಿ ಅದಕ್ಕಿಂತ ಒಂದು ಸ್ಥಾನ ಮೇಲಿದೆ.

1950-51ರ ಹೊತ್ತಿಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು ಕೇವಲ 1.82 ಬಿಲಿಯನ್‌ ಡಾಲರುಗಳಷ್ಟಿತ್ತು. 1991 ರ ವರೆಗೂ ಇದು ಎರಡಂಕಿ ದಾಟದೇ ಹಾಗೇಯೇ ಉಳಿದಿತ್ತು. ಆದರೆ ನಂತರ ತೆಗೆದುಕೊಂಡ ಆರ್ಥಿಕ ಸುಧಾರಣಾ ನೀತಿಗಳ ಭಾಗವಾಗಿ ಭಾರತದ ವಿದೇಶಿ ವಿನಿಮಯ ಮೀಸಲು ಹೆಚ್ಚುತ್ತಾ ಹೋಯಿತು. 2001-02ರ ಹೊತ್ತಿಗೆ 51 ಬಿಲಿಯನ್‌ ಡಾಲರ್‌ ವಿದೇಶಿ ವಿನಿಮಯ ಸಂಗ್ರಹವಾಗಿತ್ತು.

ಇದು ಏರಿಕೆಯಾಗಿ 2021-22ರ ಹೊತ್ತಿಗೆ 607 ಬಿಲಿಯನ್‌ ಡಾಲರುಗಳ ಮಟ್ಟವನ್ನು ತಲುಪಿದೆ. ಅಂದರೆ 1990 ರಿಂದೀಚೆಗೆ ವಿದೇಶಿ ವಿನಿಮಯವು 60 ಪಟ್ಟು ಹೆಚ್ಚಾಗಿದೆ. ಇದು ಜಾಗತಿಕ ಏರಿಳಿತಗಳ ನಡುವೆ ಭಾರತದ ಅರ್ಥ ವ್ಯವಸ್ಥೆಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!