Saturday, February 4, 2023

Latest Posts

ದಕ್ಷಿಣ ಆಫ್ರಿಕಾ ಚರ್ಚ್‌ ಪ್ರಾರ್ಥನೆ ವೇಳೆ ನುಗ್ಗಿಬಂದ ಪ್ರವಾಹ: 9 ಮಂದಿ ಸಾವು, 8 ಜನರು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಚರ್ಚ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೋಡಿದ್ದ ವೇಳೆ ಜುಕ್ಸ್‌ಕೇಯ್ ನದಿಯಿಂದ ನುಗ್ಗಿ ಬಂದ ಹಠಾತ್‌ ಪ್ರವಾಹಕ್ಕೆ ಸಿಲುಕಿ  9 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಎಂಟು ಜನರು ಕಾಣೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರು ಮತ್ತು ಕಾಣೆಯಾದವರೆಲ್ಲರೂ ನದಿಯ ತೀರದಲ್ಲಿ ನಡೆಸಲಾಗುತ್ತಿದ್ದ ಧಾರ್ಮಿಕ ಆಚರಣೆಗಳ ಭಾಗವಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಬ್ಯಾಪ್ಟಿಸಮ್  ಧಾರ್ಮಿಕ ಗುಂಪುಗಳು ಧಾರ್ಮಿಕ ಶುದ್ಧೀಕರಣಕ್ಕಾಗಿ ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಅಲೆಕ್ಸಾಂಡ್ರಾದಂತಹ ಹಿಂದಿನ ಟೌನ್‌ಶಿಪ್‌ಗಳನ್ನು ಹಾದುಹೋಗುವ ಜಕ್ಸ್‌ಕೀ ನದಿಯ ಉದ್ದಕ್ಕೂ ಆಗಾಗ್ಗೆ ಸೇರುತ್ತವೆ. ಕಳೆದ ಮೂರು ತಿಂಗಳಿಂದ ಜೋಹಾನ್ಸ್‌ಬರ್ಗ್ ನಗರದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಹೆಚ್ಚಿನ ನದಿ ತೊರೆಗಳು ಈಗ ತುಂಬಿವೆ. ಪ್ರವಾಹದಲ್ಲಿ ನಾಪತ್ತೆಯಾದರ ಶೋಧ ಮತ್ತು ಚೇತರಿಕೆ ಕಾರ್ಯಾಚರಣೆಯಲ್ಲಿ ಏಳು ಶವಗಳನ್ನು ಪತ್ತೆ ಮಾಡಿರುವುದಾಗಿ ರಕ್ಷಣಾ ಕಾರ್ಯಕರ್ತರು ವರದಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!