Monday, July 4, 2022

Latest Posts

280 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ 9 ಪಾಕಿಸ್ಥಾನೀಯರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

280 ಕೋಟಿ ಮೌಲ್ಯದ 250 ಕೆಜಿ ಹೆರಾಯಿನ್‌ ಅನ್ನು ಭಾರತದ ಒಳಗೆ ತರಲು ಪ್ರಯತ್ನಿಸುತ್ತಿದ್ದ ಒಂಭತ್ತು ಜನ ಪಾಕಿಸ್ಥಾನಿ ನಾಗರೀಕರನ್ನು ಗುಜರಾತ್‌ ಎಟಿಎಸ್‌ ಮತ್ತು ಭಾರತಿಯ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಬಂಧಿಸಿದ್ದಾರೆ.

ರಕ್ಷಣಾ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಗುಜರಾತ್‌ ಪ್ರದೇಶದಲ್ಲಿ ಪಾಕಿಸ್ಥಾನಿ ಬೋಟ್‌ ʼಅಲ್‌ ಹಜ್‌ʼ ಅಂತರಾಷ್ಟ್ರೀಯ ಜಲರೇಖೆಗಳನ್ನು ದಾಟಿ ಭಾರತೀಯ ಗಡಿರೇಖೆಗಳನ್ನು ಪ್ರವೇಶಿಸಿತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಅವುಗಳ ತಪಾಸಣೆ ನಡೆಸಿದಾಗ ಅವುಗಳಲ್ಲಿ ಮಾದಕ ದ್ರವ್ಯ ಹೆರಾಯಿನ್‌ ಪತ್ತೆಯಾಗಿದೆ. ತಕ್ಷಣವೇ ದೋಣಿಯ 9 ಸಿಬ್ಬಂದಿಗಳನ್ನು ಬಂಧಿಸಿ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಇದು ಗುಜರಾತ್‌ ತೀರದಲ್ಲಿ ಕಂಡುಬರುತ್ತಿರುವ ಎರಡನೇ ಘಟನೆಯಾಗಿದೆ. ಕಳೆದವಾರವಷ್ಟೇ ಗುಜರಾತಿನ ಕಾಂಡ್ಲಾ ಬಂದರಿನಲ್ಲಿ ಒಟ್ಟೂ 1500 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ಕರಾವಳಿಯಲ್ಲಿ ಹಡಗಿನಿಂದ ಸುಮಾರು 750 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು . ಅಲ್ಲದೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೇಶದ ಅತಿದೊಡ್ಡ ಡ್ರಗ್ ಸಾಗಣೆಯಲ್ಲಿ ಮುಂದ್ರಾ ಬಂದರಿನಲ್ಲಿ ಕಂಟೈನರ್‌ಗಳಿಂದ 21,000 ಕೋಟಿ ರೂಪಾಯಿ ಮೌಲ್ಯದ 3 ಟನ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.

ಪ್ರಸ್ತುತ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎನ್‌ಐಎ ಗೆ ಹಸ್ತಾಂತರಿಸಲಾಗಿದೆ. ಇವುಗಳ ಮಾರಾಟದಿಂದ ಬಂದ ಹಣ ಉಗ್ರಗರಿಗೆ ಸಂದಾಯವಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss