ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ತನ್ನ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳಿಗೆ ತರಬೇತಿ ಪೂರ್ಣಗೊಳಿಸಿ, ಒಂಬತ್ತು ಮಹಿಳಾ ಅಧಿಕಾರಿಗಳನ್ನು ಭಾರತೀಯ ಸೇನೆಗೆ ನೀಡುವ ಮೂಲಕ ಹೊಸ ಅಧ್ಯಾಯ ಬರೆದಿದೆ.
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಭವ್ಯ ಪಾಸಿಂಗ್ ಔಟ್ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಿದ್ದು, ಹೊಸ ಅಧಿಕಾರಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
1932ರಲ್ಲಿ ಸ್ಥಾಪನೆಯಾದ ಐಎಂಎಯಲ್ಲಿ ಇದುವರೆಗೆ ಪುರುಷ ಅಧಿಕಾರಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳು ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿರುವುದು ವಿಶೇಷವಾಗಿದೆ. ಈ ಸಾಧನೆ ಮಹಿಳಾ ಸಬಲೀಕರಣದ ಹೊಸ ಸಂಕೇತವಾಗಿದೆ ಎಂದು ರಾಷ್ಟ್ರಪತಿ ಮುರ್ಮು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
ಸೋನಿಪತ್ ಯುವತಿಯ ಸಾಧನೆಗೆ ದೇಶದ ಮೆಚ್ಚುಗೆ
ಹೊಸ ಅಧಿಕಾರಿಗಳಲ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಶೀತಲ್ ಮತ್ತು ಶಾನನ್ ಢಾಕಾ ಗಮನ ಸೆಳೆದಿದ್ದಾರೆ. ಶೀತಲ್ ತಮ್ಮ ಜಿಲ್ಲೆಯ ಮೊದಲ ಮಹಿಳಾ ಸೇನಾ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
515 ಕೆಡೆಟ್‌ಗಳ ಭವ್ಯ ಪದವಿ ಪ್ರದಾನ
ಈ ಬಾರಿಯ ಪರೇಡ್‌ನಲ್ಲಿ ಒಟ್ಟು 515 ಕೆಡೆಟ್‌ಗಳು ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ವಿವಿಧ ಸ್ನೇಹ ರಾಷ್ಟ್ರಗಳ 34 ವಿದೇಶಿ ಕೆಡೆಟ್‌ಗಳೂ ಸೇರಿದ್ದಾರೆ. ಸಮಾರಂಭದಲ್ಲಿ ರಾಜ್ಯಪಾಲ ಗುರ್ಮೀತ್ ಸಿಂಗ್, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



