ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯ ತರಗತಿ ಒಳಕ್ಕೆ ಮಕ್ಕಳು ಆಗಮಿಸುತ್ತಿದ್ದಂತೆಯೇ ಮೇಲ್ಛಾವಣಿ ಕುಸಿದು ಬಿದ್ದಿದ್ದು, 21 ಮಕ್ಕಳು ಸೇರಿದಂತೆ ಒಟ್ಟು 22 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಪೇಶಾವರದ ಆಫ್ರಿದಿ ಅಬಾದ್ನಲ್ಲಿ ನಡೆದಿದೆ.
ಅಲ್ ಖೈರ್ ಹೆಸರಿನ ಶಾಲೆಯಲ್ಲಿ ದುರಂತ ಸಂಭವಿಸಿದ್ದು, ಮಕ್ಕಳು ಹಾಗೂ ಶಿಕ್ಷಣಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಮನೆಯನ್ನು ಬಿಟ್ಟರೆ ಮಕ್ಕಳು ಸುರಕ್ಷಿತವಾಗಿರುವುದು ಶಾಲೆಯಲ್ಲಿ ಎಂದು ನಂಬಿದ್ದ ಪೋಷಕರಿಗೆ ಆಘಾತವಾಗಿದೆ.
ಸಾವನ್ನಪ್ಪಿದವರ ಪೈಕಿ 7 ರಿಂದ 12 ವರ್ಷದೊಳಗಿನ 18 ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಲ್ಲದೇ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, 21 ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವಶೇಷಗಳ ಅಡಿಯಲ್ಲಿ ಮಕ್ಕಳು ಸಿಲುಕಿದ್ದಾರೆಯೇ ಎಂದು ನೋಡಲಾಗುತ್ತಿದೆ.



