October 15, 2026
Thursday, October 15, 2026
spot_img

ಬಾಲಿವುಡ್‌ಗೆ ಕನ್ನಡತಿ ಶ್ರೀಲೀಲಾ ಭರ್ಜರಿ ಎಂಟ್ರಿ: ಕಾರ್ತಿಕ್ ಆರ್ಯನ್ ನಟನೆಯ ಹೊಸ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ತನ್ನ ಮುಂಬರುವ ಬಿಗ್ ಪ್ರಾಜೆಕ್ಟ್ ಕುರಿತು ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಾಲಿವುಡ್‌ನ ಚಾಕೊಲೇಟ್ ಹೀರೊ ಕಾರ್ತಿಕ್ ಆರ್ಯನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡತಿ ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿರುವ, ಬಹುನಿರೀಕ್ಷಿತ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವು ಏಪ್ರಿಲ್ 30, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.

https://www.instagram.com/p/DegrddSMmyx/?utm_source=ig_web_copy_link&psln=MzRlODBiNWFlZA==&srtk=MzRlODBiNWFlZA==

ಅನುರಾಗ್ ಬಸು ಮ್ಯಾಜಿಕ್, ಭೂಷಣ್ ಕುಮಾರ್ ಬಂಡವಾಳ

ಈ ಸಿನಿಮಾವನ್ನು ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಅನುರಾಗ್ ಬಸು ಅವರು ನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಪ್ರಸಿದ್ಧ ನಿರ್ಮಾಪಕ ಭೂಷಣ್ ಕುಮಾರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಟಿ-ಸೀರೀಸ್ ಸಂಸ್ಥೆಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್  ಖಾತೆಯಲ್ಲಿ ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.

ಮನ ಸೆಳೆಯುವ ಪೋಸ್ಟರ್ ಲುಕ್

ಚಿತ್ರದ ಶೀರ್ಷಿಕೆಯನ್ನು ಇನ್ನು ರಹಸ್ಯವಾಗಿಡಲಾಗಿದ್ದರೂ, ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಲುಕ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಸಿರಿನಿಂದ ಕಂಗೊಳಿಸುವ   ಚಹಾ ತೋಟದ ಮಧ್ಯೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಪರಸ್ಪರ ಹತ್ತಿರವಾಗಿ ಕುಳಿತಿರುವುದು ಕಂಡುಬಂದಿದೆ. ಇದರಲ್ಲಿ ಕಾರ್ತಿಕ್ ಗಡ್ಡದೊಂದಿಗೆ ಕೆಂಪು ಮತ್ತು ಬಿಳಿ ವಿನ್ಯಾಸದ ಸ್ವೆಟರ್ ಧರಿಸಿದ್ದರೆ, ಶ್ರೀಲೀಲಾ ತಿಳಿ ಗುಲಾಬಿ ಬಣ್ಣದ ಸುಂದರವಾದ ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ.

ಇದನ್ನೂ ಓದಿ:

ಹೃದಯದಲ್ಲಿ ಉಳಿಯುವ ಹೊಸ ಕಥೆ

ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಟಿ-ಸೀರೀಸ್, “ನಿಮ್ಮ ಹೃದಯದಲ್ಲಿ ಸದಾ ಕಾಲ ಉಳಿದುಹೋಗುವ ಒಂದು ಹೊಸ ಪ್ರೇಮ ಕಥೆ ಬೆಳ್ಳಿ ಪರದೆಯ ಮೇಲೆ ಅನಾವರಣಗೊಳ್ಳಲು ಸಂಪೂರ್ಣವಾಗಿ ಸಜ್ಜಾಗಿದೆ” ಎಂದು ಬರೆದುಕೊಂಡಿದೆ.

Must Read