October 16, 2026
Friday, October 16, 2026
spot_img

ಆನೆಗಳ ಲದ್ದಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಇದರಿಂದ ಇಷ್ಟೊಂದು ಪ್ರಯೋಜನ ಇದೆಯಾ?

ಮೈಸೂರು ದಸರಾ ಮಹೋತ್ಸವಕ್ಕೆ ಬಂದಿರುವ ಆನೆಗಳು ರಸ್ತೆಯಲ್ಲಿ ಓಡಾಡುವ ವೇಳೆ ಲದ್ದಿ ಹಾಕುತ್ತವೆ. ತಕ್ಷಣವೇ ಮನುಷ್ಯರು ಆನೆಯ ಲದ್ದಿಯನ್ನು ತುಳಿಯುತ್ತಾರೆ. ಇದರಿಂದ ಸಾಕಷ್ಟು ಲಾಭಗಳು ಇವೆ ಎನ್ನುವ ನಂಬಿಕೆ ಇದೆ. ಇದು ನಿಜವೆನ್ನುವಂತಹ ಜಾನಪದ ಕಥೆಗಳೂ ಇವೆ. ಸಾಮಾಜಿಕ ಜಾಲತಾಣದಲ್ಲಿ ಆನೆಗಳ ಲದ್ದಿಯನ್ನು ತುಳಿಯುವ ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಇದಕ್ಕೆ ಕಾರಣ ಏನು? ಲಾಭ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ..

ಆನೆಗಳು ಅನೇಕ ರೀತಿಯ ಸಸ್ಯಗಳನ್ನು, ವಿವಿಧ ಗಿಡಮೂಲಿಕೆಗಳನ್ನು ಸೇವನೆ ಮಾಡುತ್ತವೆ. ಎಲೆ ಬೇರು ಎಲ್ಲವೂ ಆನೆಯ ಹೊಟ್ಟೆ ಸೇರುತ್ತದೆ. ಆನೆಯ ಹೊಟ್ಟೆಯಲ್ಲಿ ಎಲ್ಲ ಆಹಾರವೂ ಜೀರ್ಣವಾಗೋದಿಲ್ಲ. ಹೀಗಾಗಿ ಎಲ್ಲಾದರೂ ಆನೆ ಲದ್ದಿ ಕಾಣಿಸಿದರೆ ಜನ ತಕ್ಷಣವೇ ಅದನ್ನು ತುಳಿಯುತ್ತಾರೆ. ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತವೆ. ಮಂಡಿ ನೋವು ವಾಸವಾಗುತ್ತದೆ ಎಂದು ಜನ ನಂಬುತ್ತಾರೆ.

ಇನ್ನು ದಸರಾ ಆನೆಗಳನ್ನು ಅನೇಕರು ಗಣೇಶನ ರೂಪವೆಂದು ಪರಿಗಣಿಸುತ್ತಾರೆ. ಪವಿತ್ರ ಭಾವನೆಗಳನ್ನು ಹೊಂದಿರುವ ಕಾರಣ ಆನೆಯ ಲದ್ದಿಯನ್ನು ಗೌರವಿಸುತ್ತಾರೆ. ಇದರಲ್ಲಿ ತಮ್ಮ ಕಾಲುಗಳನ್ನು ಅದ್ದಿದರೆ ಅದೃಷ್ಟ ಒಲಿದುಬರುತ್ತದೆ. ಕಷ್ಟಗಳನ್ನು ವಿಘ್ನವಿನಾಶಕ ಗಣೇಶನು ಪರಿಹರಿಸುತ್ತಾನೆ ಎನ್ನುವ ನಂಬಿಕೆ ಇದೆ.

ಆನೆಯ ಲದ್ದಿಯನ್ನು ತುಳಿಯುವುದರಿಂದ ಬಿಪಿ ಹಾಗೂ ಡಯಾಬಿಟಿಸ್‌ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ನಂಬಿಕೆ ಇದೆ. ಇದೆಲ್ಲವೂ ನಂಬಿಕೆಯೇ ಹೊರತು ಸೈನ್ಸ್‌ನಿಂದ ಪ್ರೂವ್‌ ಆಗಿಲ್ಲ.

ಆನೆಗಳ ಲದ್ದಿ ವಾಸನೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು, ಮೂಗು ಸೋರುವ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

ಆದರೆ ಸೈನ್ಸ್‌ ಪ್ರಕಾರ ಆನೆ ಲದ್ದಿಯನ್ನು ತುಳಿಯುವುದರಿಂದ ಯಾವುದೇ ಪ್ರಯೋಜನ ಇಲ್ಲ. ಪ್ರಾಣಿಗಳ ತ್ಯಾಜ್ಯದಲ್ಲಿಯೂ ಸಾವಿರಾರು ಬ್ಯಾಕ್ಟೀರಿಯಾಗಳು ಇರುತ್ತವೆ. ಇದನ್ನು ತುಳಿಯುವುದರಿಂದ ಚರ್ಮದ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

Must Read