ಮನೆಯ ಮುಖ್ಯದ್ವಾರ ಮನೆಯ ಇನ್ನಿತರ ಭಾಗಗಳಷ್ಟೇ ಮುಖ್ಯವಾಗಿದೆ. ಮೊದಲು ಜನ ನೊಟೀಸ್ ಮಾಡುವುದು ಮನೆಯ ದ್ವಾರವನ್ನು, ಲಕ್ಷ್ಮಿದೇವಿಯು ಸದಾ ಮುಖ್ಯದ್ವಾರದಿಂದ ಆಗಮಿಸುವ ಕಾರಣ ಮನೆಯಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಹಾಗೂ ಐಶ್ವರ್ಯ ವೃದ್ಧಿಯಾಗಬೇಕು ಎಂದರೆ ಮುಖ್ಯದ್ವಾರದಲ್ಲಿ ಈ ವಸ್ತುಗಳನ್ನು ಇಡಲೇಬೇಡಿ.
ಮುಖ್ಯದ್ವಾರದ ಬಳಿ ಚಪ್ಪಲಿ
ಮನೆಯ ಮುಖ್ಯದ್ವಾರದ ಬಳಿ ಚಪ್ಪಲಿ ಇಡುವುದು ನೆಗೆಟಿವಿಟಿ ಹರಡುತ್ತದೆ. ಮನುಷ್ಯನ ಶಾಂತಿ ಹಾಗೂ ನೆಮ್ಮದಿ ಹಾಳಾಗುತ್ತದೆ. ಮನೆಯಲ್ಲಿ ಹಣ ಇದ್ದರೂ ಮಾನಸಿಕ ಆರೋಗ್ಯ ಇಲ್ಲದಂತಾಗಿ ಸಮಸ್ಯೆಯಾಗುತ್ತದೆ.
ಮುಖ್ಯದ್ವಾರದ ಬಳಿ ಡಸ್ಟ್ಬಿನ್
ಮನೆಯಲ್ಲಿ ಡಸ್ಟ್ಬಿನ್ ಇಲ್ಲವಾದರೆ ಗಬ್ಬುನಾರುವುದು ಸಾಮಾನ್ಯ. ಆದರೆ ಡಸ್ಟ್ಬಿನ್ ಎಂದಿಗೂ ಮುಖ್ಯದ್ವಾರದ ಪಕ್ಕ, ಎದುರು ಅಥವಾ ಮೂಲೆಯಲ್ಲಿ ಇಡಬಾರದು. ಇಟ್ಟರೆ ನಿಮ್ಮ ಸಂಪತ್ತು ಕರಗಿ ಹೋಗುತ್ತದೆ. ದುಡಿಯುತ್ತೀರಿ ಆದರೆ ಹಣ ಎಲ್ಲಿ ಪೋಲಾಗುತ್ತಿದೆ ನಿಮಗೆ ಗೊತ್ತಾಗೋದೇ ಇಲ್ಲ.
ಮನೆಯ ಮುಖ್ಯದ್ವಾರದಲ್ಲಿ ಕಸ
ಮನೆಯ ಮುಖ್ಯದ್ವಾರದಲ್ಲಿ ಕಸ ಇದ್ದರೆ, ಗಲೀಜಾಗಿದ್ದರೆ, ಏನೇನೋ ವಸ್ತುಗಳನ್ನು ತುಂಬಿದ್ದರೆ ನಿಮ್ಮ ಮನೆಯ ಏಳಿಗೆಯ ಸಾಧ್ಯತೆ ತೀರಾ ಕಡಿಮೆ. ನಿಮ್ಮ ಮನೆಯೊಳಗೆ ಪಾಸಿಟಿವ್ ಎನರ್ಜಿ ಕಾಲಿಡಲು ಆಗುವುದಿಲ್ಲ.
ಮನೆಯ ಗೇಟ್ ಪಕ್ಕ ಮರ, ಕಂಬ
ಮನೆಯ ಎಂಟ್ರಿಯಲ್ಲಿರುವ ಗೇಟ್ನ ಪಕ್ಕವೇ ಅಥವಾ ಎದುರಿಗೇ ಮರ, ಕಂಬ ಇನ್ನೇನೇ ಉದ್ದದ ವಸ್ತು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಶ್ರೇಷ್ಠವಲ್ಲ. ಇದರಿಂದಾಗಿ ನಿಮ್ಮ ಏಳಿಕೆ ಕೊರತೆಯಾಗುತ್ತದೆ. ನಿಧಾನಗತಿಯಲ್ಲಿ ಜೀವನ ಸಾಗುತ್ತದೆ. ಜೀವನದಲ್ಲಿ ಏನೂ ಇಲ್ಲ ಎನ್ನುವ ಭಾವನೆ ಬರುತ್ತದೆ.
ಮುಖ್ಯದ್ವಾರದ ಬಳಿ ಕಗ್ಗತ್ತಲು
ಮುಖ್ಯದ್ವಾರದ ಬಳಿ ಯಾವುದೇ ಲೈಟ್ ಇಲ್ಲದಿರುವುದು, ಸದಾ ಕತ್ತಲಿನಲ್ಲಿ ಇರುವುದರಿಂದ ನಿಧಾನವಾಗಿ ನೆಗೆಟಿವಿಟಿ ನಿಮ್ಮ ಮನೆಯೊಳಗೆ ಆಗಮಿಸುತ್ತದೆ. ಮನೆಯಲ್ಲಿ ಎಲ್ಲವೂ ಇದ್ದರೂ ಜಗಳ, ಗಲಾಟೆಗಳು ಸಂಭವಿಸುತ್ತವೆ.
ಹಾಳಾದ ಡೋರ್ಬೆಲ್
ಎಲ್ಲರ ಮನೆಯಲ್ಲಿಯೂ ಡೋರ್ಬೆಲ್ ಇರುತ್ತದೆ. ಆದರೆ ಕಾಲಕ್ರಮೇಣ ಅದು ಹಾಳಾಗುತ್ತದೆ. ಆದರೂ ಅದನ್ನು ಬದಲಾಯಿಸದೇ, ಸರಿ ಮಾಡಿಸದೇ ಹಾಗೆಯೇ ಇರುತ್ತಾರೆ. ಇಂತವರ ಮನೆಯಲ್ಲಿ ಇರುವವರಿಗೆ ಸೂಕ್ತ ಅವಕಾಶಗಳು ಬರುವುದಿಲ್ಲ. ಬಂದರೂ ಅದು ನಿಮಗೆ ಏಳಿಗೆ ತರುವುದಿಲ್ಲ.
ಗೇಟ್ ಮುಂದೆ ಕನ್ನಡಿ
ಗೇಟ್ ಬಳಿ, ಮುಖ್ಯದ್ವಾರದ ಬಳಿ ಕನ್ನಡಿ ಇಡಬಾರದು. ಕನ್ನಡಿ ಇಟ್ಟರೆ ಅದರಿಂದ ಪಾಸಿಟಿವ್ ಎನರ್ಜಿ ವಾಪಾಸಾಗುತ್ತದೆ. ಮನೆಯೊಳಗೆ ಯಾವುದೇ ಉತ್ತಮ ಘಟನೆಗಳು ನಡೆಯುವುದಿಲ್ಲ. ತಮಾಷೆ, ನಗು, ಹರಟೆ, ಖುಷಿ ಎಲ್ಲವೂ ಮಾಯವಾಗಿ ಮನೆ ಬರಡು ಭೂಮಿಯಂತೆ ಅನುಭವವಾಗುತ್ತದೆ.



