October 17, 2026
Saturday, October 17, 2026
spot_img

ಗ್ರೇಟರ್ ನೋಯ್ಡಾದಲ್ಲಿ ಎರಡು ರಹಸ್ಯ ಡ್ರಗ್ಸ್ ಲ್ಯಾಬ್‌ಗಳು ಧ್ವಂಸ: ಎನ್‌ಸಿಬಿ ಕಾರ್ಯಾಚರಣೆಗೆ ಅಮಿತ್ ಶಾ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಎರಡು ಬೃಹತ್ ಡ್ರಗ್ಸ್ ತಯಾರಿಕಾ ಲ್ಯಾಬ್‌ಗಳನ್ನು ಎನ್‌ಸಿಬಿ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಈ ಕಾರ್ಯಾಚರಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಸಿಂಥೆಟಿಕ್ ಡ್ರಗ್ಸ್, ಔಷಧೀಯ ರಾಸಾಯನಿಕಗಳು ಹಾಗೂ ಡ್ರಗ್ಸ್ ತಯಾರಿಕೆಗೆ ಬಳಸುತ್ತಿದ್ದ ಸುಧಾರಿತ ತಾಂತ್ರಿಕ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವಿದೇಶಿ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಅಂತಾರಾಷ್ಟ್ರೀಯ ಸರಬರಾಜು ಜಾಲದ ಮೂಲವನ್ನು ಪತ್ತೆಹಚ್ಚಲು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಶ್ಲಾಘನೆ

ಎನ್‌ಸಿಬಿಯ ಈ ಮಹತ್ವದ ಕಾರ್ಯಾಚರಣೆಯನ್ನು ಶ್ಲಾಘಿಸಿ ಕೇಂದ್ರ ಗೃಹ ಸಚಿವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ʼಮಾದಕವಸ್ತು ದಂಧೆಕೋರರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಮತ್ತು ಅವರ ಸರಬರಾಜು ಸರಪಳಿಯನ್ನು ಕಡಿದುಹಾಕುವ ನಮ್ಮ ದೃಢ ಸಂಕಲ್ಪಕ್ಕೆ ಈ ಕಾರ್ಯಾಚರಣೆ ಪ್ರಬಲ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:

2029 ರ ವೇಳೆಗೆ ಡ್ರಗ್ಸ್ ಮುಕ್ತ ಭಾರತದ ಗುರಿ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ‘ನಶಮುಕ್ತ್ ಭಾರತ್’ ಮಿಷನ್ ಅಡಿಯಲ್ಲಿ ರೂಪಿಸಲಾಗಿರುವ ‘ನಾರ್ಕೋಟಿಕ್ಸ್ ಕಂಟ್ರೋಲ್ ವಿಷನ್ ಡಾಕ್ಯುಮೆಂಟ್ 2026–2029’ ರ ಮಾರ್ಗಸೂಚಿಗೆ ಅನುಗುಣವಾಗಿ ಈ ಕಾರ್ಯಾಚರಣೆ ನಡೆದಿದೆ. ಡಿಸೆಂಬರ್ 2029 ರ ಒಳಗಾಗಿ ದೇಶದಲ್ಲಿರುವ ಎಲ್ಲಾ ಪ್ರಮುಖ ಮಾದಕವಸ್ತು ಕಾರ್ಟೆಲ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯತಂತ್ರ ಹೊಂದಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

Must Read