ಏನೇನ್ ಬೇಕು
ಇಡ್ಲಿ ರವೆ
ಪಾಲಕ್ ಸೊಪ್ಪು
ಹಸಿರು ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮೊಸರು
ಈರುಳ್ಳಿ
ಎಣ್ಣೆ
ಉಪ್ಪು
ಅಡುಗೆ ಸೋಡಾ
ಮಾಡೋದು ಹೇಗೆ ನೋಡಿಕೊಳ್ಳಿ
ಮೊದಲು ಪಾಲಕ್ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಹಸಿರು ಮೆಣಸಿನಕಾಯಿಯೊಂದಿಗೆ ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಇಡ್ಲಿ ರವೆ ತೆಗೆದುಕೊಳ್ಳಿ. ಇದಕ್ಕೆ ತಯಾರಿಸಿಟ್ಟ ಪಾಲಕ್ ಪ್ಯೂರಿ, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಇಡ್ಲಿ ಹದಕ್ಕೆ ಬರುವಂತೆ ಕಲಸಿ. ಈಗ ಇಡ್ಲಿ ಪಾತ್ರೆಯ ತಳಕ್ಕೆ ಸ್ವಲ್ಪ ಎಣ್ಣೆ ಸವರಿ. ಹಿಟ್ಟಿಗೆ ಕೊನೆಯದಾಗಿಅಡುಗೆ ಸೋಡಾ ಸೇರಿಸಿ ಒಮ್ಮೆ ಲೈಟಾಗಿ ಮಿಕ್ಸ್ ಮಾಡಿ ತಕ್ಷಣವೇ ಇಡ್ಲಿ ಅಚ್ಚುಗಳಿಗೆ ಸುರಿಯಿರಿ. ಮಧ್ಯಮ ಉರಿಯಲ್ಲಿ ಸುಮಾರು 10 ರಿಂದ 12 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಹಬೆಯಲ್ಲಿ ಬೆಂದ ಬಳಿಕ ಗ್ಯಾಸ್ ಆಫ್ ಮಾಡಿ, 5 ನಿಮಿಷ ಬಿಟ್ಟು ಇಡ್ಲಿಗಳನ್ನು ಹೊರತೆಗೆಯಿರಿ. ಈಗ ಬಿಸಿಬಿಸಿಯಾದ, ರುಚಿಕರವಾದ ಪಾಲಕ್ ಇಡ್ಲಿ ಸವಿಯಲು ಸಿದ್ಧ!
ಇದನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಏನ್ ಲಾಭ
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಬೆಳಗಿನ ಉಪಹಾರಕ್ಕೆ ಇದನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಲ್ಲದೆ, ಜೀರ್ಣಕ್ರಿಯೆ ಸರಾಗವಾಗುತ್ತದೆ.
ವಿಶೇಷವಾಗಿ ಹಸಿರು ತರಕಾರಿಗಳನ್ನು ತಿನ್ನಲು ಹಿಂದೆಮುಂದೆ ನೋಡುವ ಮಕ್ಕಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.



