ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿನ್ನೆ ರಾತ್ರಿ ನಟನ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ.
ತದನಂತರ ಮಾತನಾಡಿ, ಗುಂಡಿನ ಸಿಡಿಮದ್ದುಗಳಿಂದ ಹಾಗೂ ಗಾಜಿನ ಚೂರುಗಳಿಂದ ಟೈಗರ್ ಅವರ ಕೈಗೆ ಗಾಯಗಳಾಗಿವೆ. ನಟ ಹಾಗೂ ಅವರ ಕುಟುಂಬದ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಇದು ಗಂಭೀರ ಘಟನೆಯಾಗಿದೆ. ಐದು ಸುತ್ತು ಗುಂಡು ಹಾರಿಸಲಾಗಿದೆ. ಆದರೆ ಅದೃಷ್ಟವಶಾತ್ ಸುರಕ್ಷಿತವಾಗಿದ್ದಾರೆ. ಅವರ ಕಾರು ಚಾಲಕನಿಗೆ ಗಾಯಗಳಾಗಿವೆ. ಈ ಘಟನೆ ಖಂಡನಾರ್ಹ ಎಂದರು. ಸಾರ್ವಜನಿಕ ವ್ಯಕ್ತಿಗಳಿಗೆ ಬಹಿರಂಗವಾಗಿ ಬೆದರಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
1990ರ ದಶಕದಲ್ಲಿ ಇಂತಹ ಗ್ಯಾಂಗ್ವಾರ್ಗಳು ಸಾಮಾನ್ಯವಾಗಿದ್ದವು. 1995ರಲ್ಲಿ ಮುಂಬೈ ಪೊಲೀಸರು ಅವುಗಳಿಗೆ ಅಂತ್ಯ ಹಾಡಿದ್ದರು. ಜನರನ್ನು ಬೆದರಿಸುವ ಇಂತಹ ಪ್ರಯತ್ನಗಳನ್ನು ಸಹಿಸುವುದಿಲ್ಲ. ಈ ಗೂಂಡಾಗಿರಿಗೆ ನಾವು ಅಂತ್ಯ ಹಾಡುತ್ತೇವೆ ಎಂದು ಹೇಳಿದರು.



